ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉದ್ಯಮ
ಎಲೆಕ್ಟ್ರಾನುಗಳು ಪ್ರವಾಹವನ್ನು ನಿಯಂತ್ರಿಸುವ ಸಾಧನಗಳನ್ನು ಬಳಸುವ ವಿಜ್ಞಾನ ಮತ್ತು ತಂತ್ರವಿದ್ಯೆಯೇ ಎಲೆಕ್ಟ್ರಾನಿಕ್ಸ್. ಪ್ರಸಕ್ತ ಲೇಖನ ಭಾರತದಲ್ಲಿ ಈ ಉದ್ಯಮದ ಬೆಳೆವಣಿಗೆ ಹಾಗೂ ಅಭಿವರ್ಧನೆ ಕುರಿತ ಒಂದು ಸಮೀಕ್ಷೆ.

	ಎಲೆಕ್ಟ್ರಾನಿಕ್ಸ್ ಉದ್ಯಮದ ಪ್ರಾಮುಖ್ಯ: ಇಂದಿನ ಪ್ರಪಂಚ ಎಲೆಕ್ಟ್ರಾನಿಕ್ಸ್‍ಮಯವಾಗಿದೆ. ಅದು ಮಾನವಜೀವನದಲ್ಲಿ ಸರ್ವವ್ಯಾಪಿ. ಭವಿಷ್ಯದಲ್ಲಿ ಅದು ಏನೇನು ಸಾಧಿಸಬಹುದು ಎಂಬುದನ್ನು ಊಹಿಸುವುದೂ ದುಸ್ತರ. ಸಣ್ಣ ಮೇಜಿನ ಗಾತ್ರದ ಯಂತ್ರದಲ್ಲಿ ಬೃಹತ್ ಗ್ರಂಥಾಲಯವನ್ನೇ ಎಲೆಕ್ಟ್ರಾನಿಕ್ಸ್ ಜ್ಞಾಪಕಶಕ್ತಿಯಿಂದ ಶೇಖರಿಸಿ ಇಡಬಹುದು. ಮಾತಾಡುವ, ಯೋಚಿಸುವ ಇತ್ಯಾದಿ ಯಂತ್ರಗಳು ಈಗಾಗಲೇ ರೂಪಿತವಾಗಿವೆ.

	1976ರಲ್ಲಿ ಪ್ರಪಂಚದ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಸುಮಾರು 100,000 ಕೋಟಿ ರೂಪಾಯಿ. ಈ ಉದ್ಯಮದಲ್ಲಿ ಕಡಿಮೆ ಬಂಡವಾಳದಿಂದ ಹೆಚ್ಚಿನ ಉತ್ಪಾದನೆ (ಸುಮಾರು 1ಕ್ಕೆ 8ರಷ್ಟು) ಸಾಧಿಸಬಹುದು. ಅಲ್ಲದೆ ಕಡಿಮೆ ಬಂಡವಾಳ ಹೂಡಿಕೆಯಿಂದ ಹೆಚ್ಚು ಜನರಿಗೆ ಉದ್ಯೋಗವನ್ನೂ ಕಲ್ಪಿಸಬಹುದು. ಉದಾಹರಣೆಗೆ ಇತರ ಉದ್ಯಮಗಳೊಡನೆ ಎಲೆಕ್ಟ್ರಾನಿಕ್ಸ್ ಉದ್ಯಮದ ಉದ್ಯೋಗೋತ್ಪಾದಕತೆಯನ್ನು ಹೋಲಿಸಿ ನೋಡಬಹುದು:
ಉದ್ಯಮ
ಒಬ್ಬನಿಗೆ ಉದ್ಯೋಗ
ಒದಗಿಸಲು ಅಗತ್ಯವಾದ
ಬಂಡವಾಳ (ರೂಗಳು)
ಒಂದು ಕೋಟಿ
ರೂಪಾಯಿ ಬಂಡವಾಳದಿಂದ
ಉದ್ಯೋಗ ದೊರೆಯುವ ಜನಸಂಖ್ಯೆ

ರಾಸಾಯನಿಕ, ಪೆಟ್ರೊಕೆಮಿಕಲ್ಸ್
…
30,4400
…
33

ಶಕ್ತಿ ಉತ್ಪಾದನೆ, ವಿತರಣೆ
…
266,467
…
35

ಕಬ್ಬಿಣವಲ್ಲದ ಲೋಹದ ಕಾರ್ಖಾನೆ
…
200,837
…
49

ಕಬ್ಬಿಣದ ಉದ್ಯಮ
…
150,331
…
66

ಸಕ್ಕರೆ
…
142,827
…
70

ರಬ್ಬರ್
…
131,022
…
76

ಕಾರು, ಲಾರಿ, ಸೈಕಲ್
…
109,443
…
91

ಕಾಗದ
…
96,865
…
103

ಯಂತ್ರಗಳ ಉತ್ಪಾದನೆ
...
79,615
…
126

ಬಟ್ಟೆ
…
74,940
…
133

ವಿದ್ಯುದುಪಕರಣಗಳು
…
40,542
…
246

ಎಲೆಕ್ಟ್ರಾನಿಕ್ಸ್
…
32,129
…
312

	ಎಲೆಕ್ಟ್ರಾನಿಕ್ಸ್ ಪ್ರಪಂಚದಲ್ಲಿ ಭಾರತದ ಸ್ಥಾನ: ಇದು ಬಲು ಕಿರಿಯದು. ಪ್ರಪಂಚದಲ್ಲಿಯ ಒಟ್ಟು ಉತ್ಪಾದನೆಯಲ್ಲಿ ಶೇಕಡಾ ಸುಮಾರು 0.4 ರಿಂದ 0.5 ಮೌಲ್ಯದ ಉಪಕರಣಗಳು ಭಾರತದಲ್ಲಿ ಉತ್ಪನ್ನವಾಗುತ್ತವೆ, ಅಷ್ಟೆ. ವಿವರಗಳನ್ನು ಈ ಕೆಳಗೆ ಕೊಡಲಾದ ಪಟ್ಟಿಯಲ್ಲಿ ನೋಡಬಹುದು (ಸಂಖ್ಯೆಗಳು ಮಿಲಿಯನ್ ಡಾಲರುಗಳನ್ನು ಸೂಚಿಸುತ್ತವೆ) :
ಇಸವಿ
ಯುಎಸ್‍ಎ
ಜಪಾನ್
ಪ.
ಯೂರೋಪ್
ಭಾರತ
ಪ್ರಪಂಚ ಕುರಿತಂತೆ ಭಾರತದ ಶೇಕಡತೆ

1975
45,000
10,000
19,000
350
0.47

1976
51,000
13,000
22,000
300
0.47

1977
59,000
18,000
30,000
500
0.45

1978
67,000
20,000
33,000
600
0.46

1979
76,000
23,000
37,000
600
0.45

ಹೀಗೆಯೇ ಬಿಡಿ ಭಾಗಗಳ ಉತ್ಪಾದನೆಯ ವಿವರಗಳನ್ನೂ ಭಾರತ ಮತ್ತು ಇತರ ರಾಷ್ಟ್ರಗಳ ತುಲನೆಯನ್ನೂ ಈ ಮುಂದಿನ ಪಟ್ಟಿಯಲ್ಲಿ ತೋರಿಸಿದೆ (ಸಂಖ್ಯೆಗಳು ಮಿಲಿಯನ್ ಡಾಲರುಗಳನ್ನು ಸೂಚಿಸುತ್ತವೆ):
ವರ್ಷ
ಯುಎಸ್‍ಎ
ಜಪಾನ್
ಪ.
ಯೂರೋಪ್
ಭಾರತ
ಪ್ರಪಂಚ ಕುರಿತಂತೆ ಭಾರತದ ಶೇಕಡತೆ

1975
6,500
3,700
5,000
90
0.58

1976
8,400
5,700
6,000
96
0.5

1977
9,400
7,200
7,600
110
0.44

1978
10,700
7,800
8,200
140
0.52

1979
13,600
8,500
8,700
160
0.5

ವಿವಿಧ ಬಗೆಯ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮತ್ತು ಬಿಡಿಭಾಗಗಳ ಬಗ್ಗೆ ಭಾರತದ ಸ್ಥಾನವನ್ನು ಈ ಮುಂದಿನ ಪಟ್ಟಿಯಲ್ಲಿ ಕಾಣಿಸಿದೆ :
	
ಪ್ರಪಂಚದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಭಾರತದ ಸ್ಥಾನ (ಶೇಕಡಾ)
ವರ್ಷ
ಉಪಕರಣಗಳು
ಬಿಡಿಭಾಗಗಳು

ಮನರಂಜನೆ
ಔದ್ಯಮಿಕ
ರಕ್ಷಣೆ
ಇತ್ಯಾದಿ
ಒಟ್ಟು
ಸೆಮಿಕಂಡಕ್ಟರ್ಸ್
ಟ್ಯೂಬುಗಳು
ಒಟ್ಟು

1975
0.5
0.42
0.47
0.32
0.44
0.58

1976
0.54
0.42
0.47
0.23
0.37
0.5

1977
0.54
0.43
0.45
0.25
0.36
0.44

1978
0.57
0.42
0.46
0.28
0.35
0.52

1979
0.61
0.4
0.45
0.31
0.42
0.5

	
ಈ ವಿವರಗಳನ್ನು ಗಮನಿಸಿದಾಗ ಎಲೆಕ್ಟ್ರಾನಿಕ್ಸ್ ಪ್ರಪಂಚದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಜಪಾನ್ ದೇಶಗಳ ಪ್ರತಿಷ್ಠಿತಸ್ಥಾನ ಮನದಟ್ಟಾಗುತ್ತದೆ. ಭಾರತದಲ್ಲಿ ಎಷ್ಟು ಹೆಚ್ಚು ಉತ್ಪಾದನೆಯಾದರೂ ಎಷ್ಟು ಹೆಚ್ಚಿನ ಬೆಳೆವಣಿಗೆ ನಡೆದರೂ ಪ್ರಪಂಚದ ಒಟ್ಟು ಉತ್ಪಾದನೆಯಲ್ಲಿ ಇದರದು ಅತ್ಯಲ್ಪ ಭಾಗ. ಈ ಸ್ಥಾನ ಉಳಿಸಿಕೊಳ್ಳಲು ಕೂಡ ಭಾರತ ಶಕ್ತಿಮೀರಿ ಹೆಣಗಹೋಗಬೇಕಾಗುತ್ತದೆ.

	ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉದ್ಯಮದ ಬೆಳೆವಣಿಗೆ: ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯ ಬೆಂಗಳೂರಿನಲ್ಲಿ ಸ್ಥಾಪಿಸಿದ (1954) ಭಾರತ್ ಎಲೆಕ್ಟ್ರಾನಿಕ್ಸ್ ಕಾರ್ಖಾನೆಯಲ್ಲಿ ಉತ್ಪಾದನೆ 1956ರಲ್ಲಿ ಆರಂಭವಾಯಿತು. ಇದರ ಮೊದಲು ಭಾರತದಲ್ಲಿ ಫಿಲಿಪ್ಸ್ ಮೊದಲಾದ ಅಂತಾರಾಷ್ಟ್ರೀಯ ಸಂಸ್ಥೆಗಳ ಕಾರ್ಖಾನೆಗಳಿದ್ದರೂ ಬೃಹತ್ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಭಾರತ್ ಎಲೆಕ್ಟ್ರಾನಿಕ್ಸ್‍ನ ಉದಯವೇ ಕಾರಣವೆನ್ನಬಹುದು.

	1983ರಲ್ಲಿ ಭಾರತದ ಎಲೆಕ್ಟ್ರಾನಿಕ್ಸ್ ಉದ್ಯಮ ರೂ 13,600 ಮಿಲಿಯನ್ನಿನಷ್ಟು ಉತ್ಪಾದನೆ ಮುಟ್ಟಿತು. 1982ರ ರೂ 12,050 ಮಿಲಿಯನ್ ಜೊತೆ ಹೋಲಿಸಿದಾಗ ಇದು 12.9% ಬೆಳೆವಣಿಗೆ ದರವನ್ನು ತೋರಿಸುತ್ತದೆ.

	ಬಿಡಿ ಭಾಗಗಳ ಉತ್ಪಾದನೆ ಮನರಂಜನೆಯ ಉಪಕರಣಗಳ ಉತ್ಪಾದನೆ ಜಾಡಿನಲ್ಲೇ ಹೋಗುತ್ತಿದೆ ಎಂಬ ಸಂಗತಿ ಅಂಕಿಅಂಶಗಳಿಂದ ವೇದ್ಯವಾಗುತ್ತದೆ. ಆದರೆ ಔದ್ಯಮಿಕ ಉಪಕರಣಗಳು (ಪ್ರೊಫೆಷನಲ್ ಎಕ್ವಿಪ್‍ಮೆಂಟ್) ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿವೆ. ಈಚೆಗೆ ಬಿಡಿಭಾಗಗಳ ಆಮದನ್ನು ಸುಲಭಗೊಳಿಸಿ ಆಮದು ಸುಂಕಗಳನ್ನು ಇಳಿಸಿರುವುದರಿಂದ ಬಿಡಿಭಾಗಗಳ ತಯಾರಿಕೆ ಅದೇ ಮಟ್ಟದಲ್ಲಿ ಗಣನೀಯ ಬೆಳೆವಣಿಗೆ ತೋರಿಸದೇ ಇದ್ದರೂ ಔದ್ಯಮಿಕ ಎಲೆಕ್ಟ್ರಾನಿಕ್ಸ್ ಮಾತ್ರ ಹೆಚ್ಚಿನ ವೇಗದಲ್ಲಿ ಬೆಳೆವಣಿಗೆ ತೋರಿಸಿದೆ. ದೂರದರ್ಶನ ನಳಿಗೆ ಮತ್ತು ಇತರ ಭಾಗಗಳ ಆಮದು ಹೆಚ್ಚಾಗಿರುವುದರಿಂದ ಮನರಂಜನೆಯ ಉಪಕರಣಗಳೂ 1982ರಲ್ಲಿ ಹೆಚ್ಚಿನ ಬೆಳೆವಣಿಗೆ ತೋರಿಸಿದುವು. 1983ರಲ್ಲಿ ರೇಡಿಯೊ ಅಭಿಗ್ರಾಹಕಗಳ ಉತ್ಪಾದನೆ ಹೆಚ್ಚಲಿಲ್ಲವಾಗಿ ಮನರಂಜನೆಯ ಉಪಕರಣಗಳ ಬೆಳೆವಣಿಗೆ ಕುಂಠಿತವಾಯಿತು.

	ಮನರಂಜನೆ: ಮನರಂಜನೆಯ ಉಪಕರಣಗಳ ಪೈಕಿ ರೇಡಿಯೊ ದೂರದರ್ಶನ ಮತ್ತು ಧ್ವನಿಮುದ್ರಕಗಳು ಶೇಕಡಾ 88 ಭಾಗದಷ್ಟಿವೆ. ಉಳಿದ ಉಪಕರಣಗಳೆಂದರೆ ರೆಕಾರ್ಡ್ ಪ್ಲೇಯರ್, ಗಡಿಯಾರ, ಸಾಧಾರಣ ಗಣನಕಾರಿಗಳು, ಧ್ವನಿವರ್ಧಕ ಉಪಕರಣಗಳು ಇತ್ಯಾದಿ.

	ರೇಡಿಯೊ: ರೇಡಿಯೊ ಅಭಿಗ್ರಾಹಕ ಸೆಟ್ಟುಗಳ ತಯಾರಿಕೆಗೆ ಎರಡು ಬಗೆಯ ಕಾರ್ಖಾನೆಗಳಿವೆ. ವ್ಯವಸ್ಥಿತವಾದ ಕೈಗಾರಿಕೆಯಲ್ಲಿ ವರ್ಷಕ್ಕೆ 2,865 ಮಿಲಿಯನ್ ಸೆಟ್ಟುಗಳ ತಯಾರಿಕೆಗೆ ಪರವಾನಗಿ ಇದೆ (1980). ಇವಲ್ಲದೆ ಸಣ್ಣ ಕೈಗಾರಿಕೆಯ ಹಲವು ಘಟಕಗಳು ರೇಡಿಯೊ ಸೆಟ್ಟುಗಳನ್ನೂ ತಯಾರಿಸುತ್ತವೆ. ಕಾರ್ಖಾನೆಯ ಉತ್ಪಾದಿತ ಬೆಲೆ ರೂ 250ಕ್ಕಿಂತ ಕಡಿಮೆ ಇರುವ ಸೆಟ್ಟುಗಳನ್ನು ಸಣ್ಣಕೈಗಾರಿಕಾ ವಿಭಾಗಕ್ಕೆ ಮೀಸಲಾಗಿಡಲಾಗಿದೆ. ಇದೂ ಅಲ್ಲದೆ ಗೃಹಕೈಗಾರಿಕೆಯಾಗಿ ಯಾವ ಲೆಕ್ಕಕ್ಕೂ ಸಿಗದ ರೀತಿಯಲ್ಲಿಯೂ ರೇಡಿಯೊ ಸೆಟ್ಟುಗಳ ತಯಾರಿಕೆ ನಡೆದಿದೆ. 1983ರಲ್ಲಿ ಸಂಖ್ಯೆ ಕಡಿಮೆಯಾಗಿದೆ. ದೂರದರ್ಶನ ಕಾರ್ಯಕ್ರಮಗಳ ಹೆಚ್ಚಿನ ಜನಪ್ರಿಯತೆ ಇದಕ್ಕೆ ಕಾರಣವಾಗಿರಬಹುದು.
	ಈಚೆಗೆ ಈಒ (ಫ್ರೀಕ್ವೆನ್ಸಿ ಮಾಡ್ಯುಲೇಶನ್-ಆವರ್ತಾಂಕ ಮೂರ್ಛನ) ರೇಡಿಯೊ ಪ್ರೇಷಕಗಳು ಮದರಾಸು ಮತ್ತು ಮುಂಬಯಿ ರೇಡಿಯೊ ಕೇಂದ್ರಗಳಲ್ಲಿ ಕೆಲಸಮಾಡುತ್ತಿವೆ. ಸಾಧಾರಣವಾಗಿ ಭಾರತದಲ್ಲಿ ಇಲ್ಲಿಯತನಕ ಉಪಯೋಗವಾಗುತ್ತಿದ್ದು ಂಒ (ಆ್ಯಂಪ್ಲಿಟ್ಯೂಡ್ ಮಾಡ್ಯುಲೇಷನ್-ಪಾರಮೂರ್ಛನ) ಪ್ರೇಷಕಗಳು. ಈಒ ವ್ಯವಸ್ಥೆಯ ರೇಡಿಯೊ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಲಭೆ ಇರುವುದೇ ಇಲ್ಲ. ದೂರದರ್ಶನ ಸೆಟ್ಟುಗಳ ಶಬ್ದ ಂಒ ರೇಡಿಯೊ ಮೂಲಕ ಬರುತ್ತದೆ. ಎಂದೇ ಇದರಲ್ಲಿ ಹಿನ್ನಲೆಗಲಭೆ ಇರುವುದಿಲ್ಲ. ಆದರೆ ಈಒ ಕಾರ್ಯಕ್ರಮಗಳನ್ನು ಪ್ರೇಷಕದ ಸುತ್ತಮುತ್ತಲೂ (ಸುಮಾರು 30 ಕಿಲೊ ಮೀಟರ್) ಮಾತ್ರ ಸ್ವೀಕರಿಸುವುದು ಸಾಧ್ಯ. ಆದ್ದರಿಂದ ಇವು ಜನನಿಬಿಡ ನಗರಗಳಲ್ಲಿ ಪ್ರತಿನಗರಕ್ಕೆ ಒಂದು ಪ್ರೇಷಕದಂತೆ ಕೆಲಸ ಮಾಡಬೇಕಾಗುತ್ತದೆ. ಸಮಾಚಾರ ಮತ್ತು ಪ್ರಸಾರ ಮಂತ್ರಾಲಯ ಅನೇಕ ಈಒ ಪ್ರೇಷಕಗಳನ್ನು ಆಕಾಶವಾಣಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದೆ. ಇದಕ್ಕೆ ಅಗತ್ಯವಾದ ಈಒ ಬ್ಯಾಂಡ್ ಇರುವ ರೇಡಿಯೊ ಸೆಟ್ಟುಗಳು ಆಗ ತಯಾರಿಕೆಗೆ ಬರುತ್ತವೆ. ಇದರಿಂದ ಹಿನ್ನೆಲೆ ಗಲಭೆ ಇಲ್ಲದ ಸಂಗೀತ ಕೇಳುವುದು ಸಾಧ್ಯವಾಗುತ್ತದೆ. ರೇಡಿಯೊ ಉದ್ಯಮ ಬೆಳೆಯಲು ಹೊಸ ಪ್ರೇರಣೆ ದೊರೆಯುತ್ತದೆ.

	ರೇಡಿಯೊ ಸೆಟ್ಟುಗಳನ್ನು Iಅ (ಇಂಟೆಗ್ರೇಟೆಡ್ ಸರ್ಕಿಟ್-ಸಮಾಕಲಿತ ಮಂಡಲ) ಉಪಯೋಗದಿಂದ ರಚಿಸುವುದು ಒಳ್ಳೆಯದು. ಇದರಿಂದ ಸೆಟ್ಟಿನ ಬೆಲೆ ಕಡಿಮೆಯಾಗಿ ಭರವಸೆ ಹೆಚ್ಚುತ್ತದೆ. ಎಂದರೆ ಕೆಡುವ ಸಂಭವ ಕಡಿಮೆ ಆಗುತ್ತದೆ. ಭಾರತ್ ಎಲೆಕ್ಟ್ರಾನಿಕ್ಸಿನಲ್ಲಿ ಇದಕ್ಕೆ ಅಗತ್ಯವಾದ Iಅಗಳನ್ನು ತಯಾರಿಸಲಾಗುತ್ತದೆ.

	ದೂರದರ್ಶನ: ದೇಶದಲ್ಲಿ 180 ದೂರದರ್ಶನ ಪ್ರೇಷಕಗಳನ್ನು ಶೇಕಡಾ 70 ಜನರಿಗೆ ತಲಪುವಂತೆ ಸ್ಥಾಪಿಸಲಾಗುತ್ತಿದೆ. ಇದರಿಂದ ದೂರದರ್ಶನ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆತಿದೆ. ವರ್ಣದೂರದರ್ಶನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಬೇಕೆಂಬ ನಿರ್ಣಯವನ್ನು ಸರ್ಕಾರದ ಎಲೆಕ್ಟ್ರಾನಿಕ್ಸ್ ಇಲಾಖೆ ಫೆಬ್ರವರಿ 1983ರಲ್ಲಿ ತೆಗೆದುಕೊಂಡಿತು. ವರ್ಣದೂರದರ್ಶನ ಕಾರ್ಯಕ್ರಮಗಳು ಏಷಿಯಾಡಿನೊಡನೆ ಹೆಚ್ಚಾಗತೊಡಗಿದುವು. ಸರ್ಕಾರದ ಗುರಿ ಐದುಸಾವಿರ ರೂಪಾಯಿಗೇ ವರ್ಣದೂರದರ್ಶನ ಸೆಟ್ಟು ದೊರೆಯಬೇಕೆಂದಿದೆ. ಇದಕ್ಕಾಗಿ ಆಮದು ಸುಂಕಗಳನ್ನು ಇಳಿಸಲಾಗಿದೆ. ದೇಶದಲ್ಲಿಯೇ ವೀಡಿಯೋ ಕ್ಯಾಸೆಟ್ ರೆಕಾರ್ಡುಗಳ ತಯಾರಿಕೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಒಂದು ಸಮಿತಿ ನೇಮಿತವಾಗಿದ್ದು ಇದು ಸರ್ಕಾರಕ್ಕೆ ತನ್ನ ಶಿಫಾರಸುಗಳನ್ನು ಒಪ್ಪಿಸಿದೆ.

	ಮನರಂಜನೆಯ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ರೇಡಿಯೋದ ಪ್ರಮಾಣ ಕಡಿಮೆಯಾಗಿ ದೂರದರ್ಶನದ ಪ್ರಮಾಣ ಹೆಚ್ಚುತ್ತಲೇ ಬಂದಿದೆ. ಭಾರತಾದ್ಯಂತ ದೂರದರ್ಶನ ಪ್ರೇಷಕಗಳನ್ನು ಸ್ಥಾಪಿಸಿ ಇನ್ಸಾಟ್-1 ಉಪಗ್ರಹದ ಮೂಲಕ ದೆಹಲಿಯಿಂದ ಪ್ರಸಾರವಾಗುವ ದೂರದರ್ಶನ ಕಾರ್ಯಕ್ರಮವನ್ನು ವಿಸ್ತಾರವಾಗಿ ಹರಡುತ್ತಿರುವುದರಿಂದ ದೂರದರ್ಶನ ಸೆಟ್ಟುಗಳಿಗೆ ಬೇಡಿಕೆ ಬೃಹತ್ತಾಗಿ ಬೆಳೆದಿದೆ :

1975
1976
1977

ರೇಡಿಯೊ ಸೆಟ್ಟುಗಳ ಪಾಲು
…
55%
50%
44%

ದೂರದರ್ಶನ ಸೆಟ್ಟುಗಳ ಪಾಲು
…
25%
30%
38%

ಮನರಂಜನೆಯಲ್ಲಿ ರೇಡಿಯೊ ದೂರದರ್ಶನಗಳ ಪಾಲು

80% 
80%
82%

	
	ದೂರದರ್ಶನ ಸೆಟ್ಟುಗಳ ಬೆಲೆ: ಭಾರತ ಸರ್ಕಾರ ದೂರದರ್ಶನ ಸೆಟ್ಟುಗಳ ಬೆಲೆಗಳನ್ನು ಇಳಿಸುವ ಸಲುವಾಗಿ ಕೆಲವು ಕ್ರಮಗಳನ್ನು ಕೈಗೊಂಡಿತು. ಕೇಳಿದವರಿಗೆಲ್ಲ ತಯಾರಿಕೆಗೆ ಪರವಾನಗಿ ಕೊಡುವುದರ ಜೊತೆಗೆ ಸುಂಕವನ್ನು ಕಡಿಮೆ ಮಾಡಿತು ಕೂಡ. ಫಲವಾಗಿ 350 ಉತ್ಪಾದಕರಿಗೆ ವರ್ಷಕ್ಕೆ 11 ಮಿಲಿಯನ್ ಬಣ್ಣದ ದೂರದರ್ಶನ ಸೆಟ್ಟುಗಳನ್ನು ತಯಾರಿಸಲು ಪರವಾನಿಗೆ ಕೊಡಲಾಗಿದೆ. ಆದರೆ ಬೇಡಿಕೆ ಸುಮಾರು 800,000 ಸೆಟ್ಟುಗಳಿಗೆ ಮಾತ್ರ ಇರಬಹುದು. ಆದ್ದರಿಂದ ಈ ಕ್ಷೇತ್ರದಲ್ಲಿ ಬಿರುಸಾದ ಪೈಪೋಟಿ ನಿರೀಕ್ಷಿಸಬಹುದು. ಕರಿ-ಬಿಳಿ ಸೆಟ್ಟುಗಳಿಗೆ ಸುಮಾರು 1.2 ಮಿಲಿಯನ್ನುಗಳಷ್ಟು ಬೇಡಿಕೆ ಬರಬಹುದು. ಏಕೆಂದರೆ 1985ರ ವೇಳೆಗೆ ಭಾರತದ ಶೇಕಡಾ 70ಭಾಗದಲ್ಲಿ ದೂರದರ್ಶನ ಕಾರ್ಯಕ್ರಮಗಳು ಇನ್ಸಾಟ್ ಮೂಲಕ ದೊರೆಯುವಂತಾಗುತ್ತವೆ.

	ಲಂಡನ್ನಿನಲ್ಲಿ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತಯಾರಿಸುತ್ತಿರುವ ಬಿನಾ ಟೋನ್ ಎಂಬ ಸಂಸ್ಥೆ ದೆಹಲಿಯ ಹತ್ತಿರ ಐದು ಕೋಟಿ ರೂಪಾಯಿ ಬಂಡವಾಳದ ಆಧುನಿಕ, ಸ್ವಯಂಚಾಲಿತ ಕಾರ್ಖಾನೆಯೊಂದನ್ನು ಸ್ಥಾಪಿಸುತ್ತಿದೆ.  ದೃಢವಾದ ಮತ್ತು ಬಾಳಿಕೆಬರುವ ದೂರದರ್ಶನ ಸೆಟ್ಟುಗಳನ್ನು ಅಗ್ಗವಾಗಿ ತಯಾರಿಸಬೇಕೆಂಬುದೇ ಇದರ ಗುರಿ. ಇದನ್ನು ನೋಡಿ ಕ್ರೌನ್ ಈ ಕಾರ್ಖಾನೆಯ ಹತ್ತಿರವೇ ತನ್ನದೂ ಒಂದು ಆಧುನಿಕ ಕಾರ್ಖಾನೆಯನ್ನು ಆರಂಭಿಸುತ್ತಿದೆ.

	ಈ ಬಿರುಸಿನ ಪೈಪೋಟಿಯಿಂದ ಕೆಲವು ತಯಾರಕರು ಕೈಸುಟ್ಟುಕೊಂಡರೂ ಬಳಕೆದಾರನಿಗೆ ಅಪಾರ ಲಾಭವುಂಟು. ದೂರದರ್ಶನ ಉದ್ಯಮದಲ್ಲಿ ವ್ಯವಸ್ಥಿತ ಉದ್ಯಮ ವಿಭಾಗದಲ್ಲಿ 245,000 ಸೆಟ್ಟುಗಳಿಗೂ ಸಣ್ಣ ಕೈಗಾರಿಕೆಯ ವಿಭಾಗದಲ್ಲಿ 316,000 ಸೆಟ್ಟುಗಳಿಗೂ ಪರವಾನಿಗೆ ಕೊಡಲಾಗಿದೆ (1979). ಬೇಡಿಕೆ ಹೆಚ್ಚಾದ ಹಾಗೆಲ್ಲ ಹೆಚ್ಚು ಪರವಾನಗಿ ಕೊಡಲಾಗುತ್ತಿದೆ.

	ಇತರ ಜನರಂಜನೆಯ ಉಪಕರಣಗಳು, ಧ್ವನಿಮುದ್ರಕಗಳು: ವ್ಯವಸ್ಥಿತ ಉದ್ಯಮವಿಭಾಗದಲ್ಲಿ 142,500 ಸೆಟ್ಟುಗಳಿಗೂ ಸಣ್ಣ ಕೈಗಾರಿಕೋದ್ಯಮ ವಿಭಾಗದಲ್ಲಿ 499,500 ಸೆಟ್ಟುಗಳಿಗೂ ಪರವಾನಗಿ ಕೊಡಲಾಗಿದೆ. ಆದರೆ ಭಾರತದಲ್ಲಿ ತಯಾರಾದ ಧ್ವನಿಮುದ್ರಕಗಳ (ಟೇರ್ಪರೆಕಾರ್ಡರ್ಸ್) ಗುಣಮಟ್ಟ ಚೆನ್ನಾಗಿಲ್ಲದ ಕಾರಣ ಉತ್ಪಾದನೆ ಅಷ್ಟೇನೂ ಬೆಳೆದಿಲ್ಲ. ಜಪಾನಿನ ಧ್ವನಿಮುದ್ರಕಗಳಿಗೆ ಬೇಡಿಕೆ ಹೆಚ್ಚು. ಇವು ಕಡಿಮೆ ಬೆಲೆಯಲ್ಲಿ ಉತ್ಕøಷ್ಟ ಗುಣಮಟ್ಟ ಹೊಂದಿರುವುದೇ ಕಾರಣ.

	ರೆಕಾರ್ಡ್‍ಪ್ಲೇಯರುಗಳು: ಒಟ್ಟು 355,000 ಸೆಟ್ಟುಗಳಿಗೆ ಪರವಾನಗಿ ಇದೆ.

	ಪ್ರವರ್ಧಕ ಮತ್ತು ಧ್ವನಿವರ್ಧಕ (ಆ್ಯಂಪ್ಲಿಫಯರ್ ಮತ್ತು ಲೌಡ್‍ಸ್ಪೀಕರ್) ವ್ಯವಸ್ಥೆಗಳು: ಸಣ್ಣ ಕೈಗಾರಿಕೆಯಲ್ಲಿ 197.400 ಸೆಟ್ಟುಗಳಿಗೂ ವ್ಯವಸ್ಥಿತ ಉದ್ಯಮ ವಿಭಾಗದಲ್ಲಿ 12,770 ಸೆಟ್ಟುಗಳಿಗೂ ಪರವಾನಗಿ ಇದೆ.

	ಟು-ಇನ್-ಒನ್ (ಒಂದರಲ್ಲಿ ಎರಡು); ರೇಡಿಯೊ-ಧ್ವನಿಮುದ್ರಕಗಳ ಜೋಡಿ ಯಂತ್ರಕ್ಕೂ ಹೆಚ್ಚಿನ ಬೇಡಿಕೆ ಇದೆ. ಇದರಲ್ಲಿ ಧ್ವನಿಮುದ್ರಕದ ಗುಣಮಟ್ಟ ಹೆಚ್ಚಿದರೆ ಜನಪ್ರಿಯತೆಯೂ ಹೆಚ್ಚುವುದು.

	ಎಲೆಕ್ಟ್ರಾನಿಕ್ಸ್ ಗಡಿಯಾರಗಳು: ಈ ಕ್ಷೇತ್ರ ವಿಶೇಷವಾಗಿ ಸಣ್ಣ ಕೈಗಾರಿಕೆಯ ವಿಭಾಗದಲ್ಲಿ ಹರಡಿದೆ. ಗಡಿಯಾರಗಳಿಗೆ ಅಗತ್ಯವಾದ ಬ್ಯಾಟರಿ ಈಗ ಭಾರತದಲ್ಲಿ ತಯಾರಾಗುತ್ತಿದೆ. ಸರಿಯಾದ ಕ್ರಿಸ್ಟಲ್, ಸಿಲಿಕಾನ್ ಚಿಪ್‍ಗಳೂ ಭಾರತದಲ್ಲಿಯೇ ದೊರೆಯುವಂತಾದರೆ ಕಡಿಮೆ ಬೆಲೆಯ ವಿಶ್ವಾಸಾರ್ಹ ಕೈಗಡಿಯಾರಗಳು ಅಂಕ (ಡಿಜಿಟಲ್) ಮತ್ತು ಸಾದೃಶ್ಯ (ಅನಲಾಗ್) ರೀತಿಯಲ್ಲಿ ದೊರೆಯುವ ಸಂಭವ ಉಂಟು. ಹೊಸ ಹೊಸ ತಂತ್ರಗಳ ಬಳಕೆಯಿಂದ ದೊರೆಯುವ ಹೊಸ ಸಿಲಿಕಾನ್ ಚಿಪ್ ಮಾದರಿಗಳಿಂದ ಉತ್ತಮ ಗಡಿಯಾರಗಳು ದೊರೆಯುವಂತಾಗುತ್ತವೆ. ಜಪಾನ್, ಹಾಂಕಾಂಗ್, ಕೊರಿಯ ಮೊದಲಾದ ಕಡೆಗಳಿಂದ ಅಮಿತ ಪ್ರಮಾಣದಲ್ಲಿ ಕಳ್ಳ ಸಾಗಾಣಿಕೆಯಿಂದ ಬರುವ ಕೈಗಡಿಯಾರಗಳು ಅತಿ ಅಗ್ಗವಾಗಿ ಸಿಗುತ್ತವೆಯಾದ್ದರಿಂದ ನಮ್ಮ ದೇಶದಲ್ಲಿಯೇ ಚಿಪ್ ಬ್ಯಾಟರಿ ಅಕ್ಷರ ಸಂಖ್ಯೆಗಳ ಪ್ರದರ್ಶನವಿರುವ ಗಡಿಯಾರಗಳು ಅಗ್ಗವಾಗಿ ದೊರೆತರೆ ಇಲ್ಲಿಯ ಗಡಿಯಾರಗಳು ಈ ಕ್ಷೇತ್ರದಲ್ಲಿರುವ ಪೈಪೋಟಿ ಎದುರಿಸುವುದು ಸಾಧ್ಯವಾಗುತ್ತದೆ.

	ಬೋಧನೆಯ ಮತ್ತು ಆಟದ ಯಂತ್ರಗಳು: ಜಪಾನಿನಿಂದ ಬಂದಿರುವ ಭಾಷೆ-ಗಣಿತ ಬೋಧಕ ಯಂತ್ರಗಳು. ಚದುರಂಗ ಮೊದಲಾದ ಆಟ ಆಡುವ ಯಂತ್ರಗಳು, ಸಂಗೀತವಾದ್ಯಗಳು ಮುಂತಾದವು ಜನಪ್ರಿಯವಾಗಿವೆ. ಇದಕ್ಕಾಗಿ ವಿಶೇಷರೀತಿಯ ಸಿಲಿಕಾನ್ ಚಿಪ್‍ಗಳ ಉಪಜ್ಞೆ ಆಗಬೇಕು. ಇಂಥ ಚಿಪ್‍ಗಳನ್ನು ಕೂಡ ಭಾರತದಲ್ಲಿ ತಯಾರಿಸಬೇಕೆಂಬ ಯೋಜನೆ ಇದೆ. ಎಲ್ಲ ವಯಸ್ಸಿನ ಗ್ರಾಹಕರಿಗೂ ಮನರಂಜನೆ ಮತ್ತು ಬೋಧನೆ ತರುವ ಈ ಯಂತ್ರಗಳು ಅಗ್ಗವಾಗಿ ದೊರೆಯುವಂತಾದರೆ ಅವಕ್ಕೆ ದೇಶ ವಿದೇಶಗಳಲ್ಲಿ ಬೇಡಿಕೆ ಬೆಳೆಯುತ್ತದೆ. ಭಾರತದಲ್ಲಿ ಈ ಉಪಕರಣಗಳನ್ನು ತಯಾರಿಸುವ ಎಲೆಕ್ಟ್ರಾನಿಕ್ಸ್ ಉದ್ಯಮ ಇನ್ನೂ ಪ್ರಾರಂಭವಾಗಬೇಕಾಗಿದೆ.

	ಔದ್ಯಮಿಕ ಎಲೆಕ್ಟ್ರಾನಿಕ್ಸ್: ಭಾರತದಲ್ಲಿ ಮನರಂಜನೆಯ ಉಪಕರಣಗಳಿಗಿಂತ ಔದ್ಯಮಿಕ ಉಪಕರಣಗಳು (ಪ್ರೊಫೆಷನಲ್ ಎಕ್ವಿಪ್‍ಮೆಂಟ್) ಹೆಚ್ಚಿನ ಪ್ರಮಾಣದಲ್ಲಿ ತಯಾರಾಗುತ್ತಿವೆ. ಇವುಗಳ ಉತ್ಪಾದನೆಯ ಬೆಳೆವಣಿಗೆ ವೇಗವೂ ಹೆಚ್ಚಾಗಿರುತ್ತದೆ. ಈ ಕ್ಷೇತ್ರದಲ್ಲಿಯ ಕೆಲವು ಉಪಕರಣಗಳನ್ನು ಈಗ ಗಮನಿಸೋಣ.

	ಸಂಪರ್ಕಸಾಧನಗಳು: ದೂರಸಂಪರ್ಕಸಾಧನಗಳ ಉದ್ಯಮ ಆರನೆಯ ಯೋಜನೆಯ ಕಾಲದಲ್ಲಿ ಒಂದೇ ಸಮವಾದ ಪ್ರಗತಿ ಸಾಧಿಸಿದೆ. ಈ ಕ್ಷೇತ್ರದಲ್ಲಿ ಉಪಕರಣ ವ್ಯವಸ್ಥೆಗಳಿಗೆ ಬೇಡಿಕೆ ಹೆಚ್ಚುತ್ತಲೇ ಇರುವುದರಿಂದ ಉತ್ಪಾದನೆಯೂ ಹೆಚ್ಚುತ್ತಲೇ ಬಂದಿದೆ. ದೂರಸಂಪರ್ಕ ಸಾಧನಗಳಲ್ಲಿ ರೇಡಿಯೊ. ಟೆಲೆಕ್ಸ್, ದೂರವಾಣಿ, ದೂರಮುದ್ರಕಗಳು (ಟೆಲಿಪ್ರಿಂಟರ್ಸ್) ಸೇರುತ್ತವೆ. ಸಾಧಾರಣವಾಗಿ ಈ ಕ್ಷೇತ್ರವೆಲ್ಲ ವ್ಯವಸ್ಥಿತ ದೊಡ್ಡ ಕೈಗಾರಿಕೆಗಳಲ್ಲಿಯೇ ನೆಲಸಿದೆ.

	ಈ ಉಪಕರಣಗಳ ವ್ಯವಸ್ಥೆಗಳ ಕಾರ್ಯದಕ್ಷತೆಯನ್ನು ಹೆಚ್ಚಿಸುವುದಕ್ಕಾಗಿ ಸಾದೃಶ್ಯ (ಅನಲಾಗ್) ತಂತ್ರವನ್ನು ಕೈಬಿಟ್ಟು ಅಂಕ (ಡಿಜಿಟಲ್) ತಂತ್ರವನ್ನು ಉಪಯೋಗಿಸಲಾಗುತ್ತಿದೆ. ಸಾದೃಶ್ಯ ತಂತ್ರದಲ್ಲಿ ಶಬ್ದ ಅಥವಾ ಸಂಜ್ಞೆಯ ರೂಪವನ್ನು ಬದಲಾಯಿಸದೇ ಅದನ್ನೇ ಪ್ರವರ್ಧಿಸಿ (ಆಂಪ್ಲಿಫೈ) ರೇಡಿಯೊ ಅಥವಾ ದೂರವಾಣಿ ವ್ಯವಸ್ಥೆಯ ಮೂಲಕ ದೂರಕ್ಕೆ ರವಾನಿಸಲಗುವುದು. ಅಭಿಗ್ರಾಹಕದಲ್ಲಿ (ರಿಸೀವರ್) ಮೊದಲಿದ್ದ ಶಬ್ದ ಅಥವಾ ಸಂಜ್ಞೆಯ ರೂಪವೇ ಗ್ರಾಹಕನಿಗೆ ದೊರೆಯುತ್ತದೆ. ಅಂಕ ತಂತ್ರದಲ್ಲಿ ಶಬ್ದ ಅಥವಾ ಸಂಜ್ಞೆಯನ್ನು ವಿಶ್ಲೇಷಿಸಿ ಸಂಖ್ಯೆಗಳಾಗಿ ಪರಿವರ್ತಿಸಿ ಇವನ್ನು ದೂರಕ್ಕೆ ರೇಡಿಯೊ ಅಥವಾ ದೂರವಾಣಿ ಮೂಲಕ ಪ್ರೇಷಿಸಲಾಗುವುದು. ಕೊನೆಯಲ್ಲಿ ಈ ಸಂಖ್ಯೆಗಳನ್ನು ಮೊದಲಿದ್ದ ಶಬ್ದ ಅಥವಾ ಸಂಜ್ಞೆಗಳಾಗಿ ಪರಿವರ್ತಿಸಿ ಗ್ರಾಹಕನಿಗೆ ಊಡಲಾಗುತ್ತದೆ. ಈ ವ್ಯವಸ್ಥೆ ಹೆಚ್ಚು ಜಟಿಲವಾದುವು. ಆದರೆ ಇದರಲ್ಲಿ ಹಿನ್ನೆಲಯ ಗಲಭೆ ಬಲುಮಟ್ಟಿಗೆ ನಿವಾರಣೆಯಾಗಿರುತ್ತದೆ. ಅಂಕ ವ್ಯವಸ್ಥೆಗಳಲ್ಲಿ ಸಮಾಕಲಿತ ಮಂಡಲ (ಇಂಟೆಗ್ರೇಟೆಡ್ ಸರ್ಕಿಟ್) ಅದರಲ್ಲೂ ಎಲ್‍ಎಸ್‍ಐ (ಲಾರ್ಜ್ ಸ್ಕೇಲ್ ಇಂಟೆಗ್ರೇಷನ್) ಉಪಯೋಗಿಸಲಾಗುವುದರಿಂದ ವ್ಯವಸ್ಥೆಯ ಕಾರ್ಯಕ್ಷಮತೆ ಹೆಚ್ಚಿ ಉಪಕರಣಗಳ ಗಾತ್ರ ಕುಗ್ಗಿ ಕ್ರಮೇಣ ಬೆಲೆಯೂ ಉಪಯೋಗಿಸುವ ಶಕ್ತಿಯೂ ಕಡಿಮೆ ಆಗುತ್ತವೆ. ಭಾರತದಲ್ಲಿಯೂ ಈ ತಂತ್ರವಿದ್ಯೆಯ ಬಳಕೆ ಕ್ರಮವಾಗಿ ಬಳಕೆಗೆ ಬರುತ್ತಿದೆ.

	ದೂರವಾಣಿ ವ್ಯವಸ್ಥೆಯಲ್ಲಿಯೂ ಟಪ್ಪೆಗಳನ್ನು (ರಿಲೇ) ಉಪಯೋಗಿಸುವ ಪದ್ಧತಿ ಬಹಳ ಶಕ್ತಿ ಮತ್ತು ವೆಚ್ಚಗಳಿಗೆ ಕಾರಣವಾಗಿದೆ. ಇದರ ಬದಲು ಟ್ರಾನ್ಸಿಸ್ಟರ್ ತಂತ್ರವನ್ನು ಉಪಯೋಗಿಸಿ ನಿರ್ಮಿತವಾದ ವ್ಯವಸ್ಥೆಯಲ್ಲಿ ಕಡಿಮೆ ಶಕ್ತಿ. ಗಾತ್ರ ಮತ್ತು ಬೆಲೆಯ ವಿನಿಮಯಕೇಂದ್ರಗಳು ಹೆಚ್ಚಿನ ಕಾರ್ಯಕ್ಷಮತೆ ಮತ್ತು ದೃಢತೆ ಹೊಂದಿರುತ್ತದೆ. ಗೊಂಡಾದಲ್ಲಿರುವ ಕಾರ್ಖಾನೆಯಲ್ಲಿ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ (IಖಿI) ಇಂಥ ಎಲೆಕ್ಟ್ರಾನಿಕ್ಸ್ ಸ್ವಿಚಿಂಗ್ ಸಿಸ್ಟಮ್‍ಗಳನ್ನು ಫ್ರಾನ್ಸಿನ ತಂತ್ರವಿದ್ಯೆಯ ಸಹಾಯದಿಂದ ತಯಾರಿಸುತ್ತಿದೆ. ಬೆಂಗಳೂರಿನಲ್ಲಿ ಇಂಥ ವ್ಯವಸ್ಥೆಗಳನ್ನು ತಯಾರಿಸುವ ಎರಡನೆಯ ಕಾರ್ಖಾನೆ ಪ್ರಾರಂಭವಾಗಲಿದೆ. ಪಾಲ್ಘಾಟಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಕಾರ್ಖಾನೆಯಲ್ಲಿ ಎಲೆಕ್ಟ್ರಾನಿಕ್ಸ್  ಟ್ರಂಕ್ ಎಕ್ಸ್‍ಛೇಂಜಿನ (ವಿನಿಮಯಕೇಂದ್ರ) ತಯಾರಿಕೆ ಪ್ರಾರಂಭವಾಗಿದೆ. 1990ರ ವೇಳೆಗೆ ಭಾರತದಲ್ಲಿ ಸ್ಥಳೀಯ ವಿನಿಮಯಕೇಂದ್ರಗಳು 54% ಎಲೆಕ್ಟ್ರಾನಿಕ್ಸ್ ತರಹದವೂ 26% ಕ್ರಾಸ್‍ಬಾರ್ ತರಹದವೂ ಉಳಿದವು ಸ್ಟ್ರೌಗರ್ ಮತ್ತು ಮಾನವಚಾಲಿತ ತರಹದವೂ ಆಗಿರುತ್ತವೆ. ದೆಹಲಿಯಲ್ಲಿ ದೇಶದ ಮೊದಲನೆಯ ಎಲೆಕ್ಟ್ರಾನಿಕ್ಸ್ ದೂರವಾಣಿ ವಿನಿಮಯಕೇಂದ್ರ ಉದ್ಘಾಟಿತವಾಗಿದೆ.

	ರೇಡಿಯೊ ಟ್ರಾನ್ಸ್‍ಸೀವರ್ (ಮಾತಾಡು ಮತ್ತು ಕೇಳು) ಕೈಗಾರಿಕೆ ಶೀಘ್ರವಾಗಿ ಬೆಳೆದಿದೆ. ಹೈದರಾಬಾದಿನ ಇಅIಐ ಮಾತ್ರವಲ್ಲದೆ ಬಂಗಾಳದ Wಇಃಇಐ. ಪಂಜಾಬಿನ PWSಐ, ಉತ್ತರ ಪ್ರದೇಶದ UPಖಿಖಔಓ ಇಂಥ ಸೆಟ್ಟುಗಳನ್ನು ಹೆಚ್ಚಾಗಿ ಉತ್ಪಾದಿಸುತ್ತಿವೆ ಕರ್ನಾಟಕದ ಏಇಔಓIಅS ತಮಿಳುನಾಡಿನ ಇಐಅಔಖಿ ಮತ್ತು ರಾಜಸ್ಥಾನದ ಖIIಅಔ ಕೂಡ ಈ ಕ್ಷೇತ್ರದಲ್ಲಿ ಅಡಿಯಿಡುತ್ತಿವೆ. ಸೂಕ್ಷ್ಮ ತರಂಗ (ಮೈಕ್ರೊವೇವ್) ವ್ಯವಸ್ಥೆಗಳನ್ನು IಖಿI ತಯಾರಿಸುತ್ತಿದೆ.

	ರಕ್ಷಣಾ ಪಡೆಗಳಿಗೆ ಅಗತ್ಯವಾದ ರೇಡಿಯೊ ಮರುಪ್ರಸಾರ ವ್ಯವಸ್ಥೆಗಳನ್ನು ಹೈದರಾಬಾದಿನ ಊಂಐ ಮತ್ತು ಭಾರತ್ ಎಲೆಕ್ಟ್ರಾನಿಕ್ಸುಗಳು ತಯಾರಿಸುತ್ತಿವೆ. ಭವಿಷ್ಯಕ್ಕೆ ಬೇಕಾದ ಹೊಸ ಬಗೆಯ ಆವಿಷ್ಕಾರಗಳನ್ನು ರೂಪಿಸುತ್ತಿವೆ. 1988ರ ವೇಳೆಗೆ ಇವು ಉತ್ಪಾದಿಸಲ್ಪಡಬಹುದು. ರಕ್ಷಣಾ ಇಲಾಖೆಗೆ ಬೇಕಾದ ರೇಡಿಯೊ ಟ್ರಂಕ್ ವ್ಯವಸ್ಥೆಯನ್ನು ಬೆಂಗಳೂರಿನ ಐಖಆಇ ತಯಾರಿಸಿದ ರೂಪರೇಷೆಯಂತೆ ಪಂಜಾಬ್ ವೈರಲೆಸ್‍ನವರು ಉತ್ಪಾದಿಸುವವರಿದ್ದಾರೆ.

	ದೂರವಾಣಿಗಳ ಹೊಸ ಗುಂಡಿ-ಒತ್ತು (ಪುಷ್‍ಬಟನ್) ರೀತಿಯ ಯಂತ್ರಗಳನ್ನು ಲಾಭದಾಯಕವಾಗಿ ತಯಾರಿಸುವುದಕ್ಕಾಗಿ ಇದನ್ನು ತಯಾರಿಸುವ ಆರು ಕೇಂದ್ರಗಳು ವರ್ಷಕ್ಕೆ ಅರ್ಧ ಮಿಲಿಯನ್ ದೂರವಾಣಿ ಸೆಟ್ಟುಗಳನ್ನು ಉತ್ಪಾದಿಸುವ ಸಾಮಥ್ರ್ಯ ಹೊಂದಬೇಕೆಂದು ನಿಶ್ಚಯಿಸಲಾಗಿದೆ.  ಇದಕ್ಕೆ ಬೇಕಾದ ತಂತ್ರವಿದ್ಯೆಯನ್ನು ಕೊಂಡುಕೊಳ್ಳಲು ನೇಮಿತವಾದ ಸಮಿತಿ ಶೀಘ್ರದಲ್ಲಿಯೇ ತನ್ನ ವರದಿಯನ್ನು ಒಪ್ಪಿಸುವುದೆಂದು ನಿರೀಕ್ಷಿಸಲಾಗಿದೆ (1984).
	ಮದ್ರಾಸಿನ ಹಿಂದೂಸ್ಥಾನ್ ಟೆಲೆಪ್ರಿಂಟರ್ ಲಿಮಿಟೆಡಿಗಾಗಿ ಎಲೆಕ್ಟ್ರಾನಿಕ್ಸ್ ಟೆಲೆಪ್ರಿಂಟರ್ಸ್ ತಂತ್ರವಿದ್ಯೆಯನ್ನು ಆಮದು ಮಾಡಲು ಇನ್ನೊಂದು ಸಮಿತಿ ತನ್ನ ವರದಿಯನ್ನು ಒಪ್ಪಿಸಿದೆ. ಶೀಘ್ರದಲ್ಲಿ ಈ ಕೆಲಸ ಪ್ರಾರಂಭವಾಗುತ್ತದೆ.
	1984ರ ಕೊನೆಯ ವೇಳೆಗೆ ಭಾರತದಲ್ಲಿ 180 ಕಡಿಮೆ ಶಕ್ತಿಯ ಪ್ರೇಷಕಗಳನ್ನೂ ಅವುಗಳ ಜೊತೆಯಲ್ಲಿ ಉಪಗ್ರಹ ಇನ್‍ಸಾಟ್ 1ಃಯಿಂದ ಕಾರ್ಯಕ್ರಮಗಳನ್ನು S ಬ್ಯಾಂಡ್ ಸೂಕ್ಷ್ಮತರಂಗದಲ್ಲಿ ಸ್ವೀಕರಿಸಿ ಪುನಃ ಪ್ರಸಾರ ಮಾಡುವ ವ್ಯವಸ್ಥೆಯನ್ನೂ ಬೆಂಗಳೂರಿನ ಃಇಐ (69 ಪ್ರೇಷಕಗಳು) ಮತ್ತು ಇತರ ಸಂಸ್ಥೆಗಳಿಗೆ ತಯಾರಿಸಲು ವಹಿಸಲಾಗಿದೆ. ಇವುಗಳಲ್ಲಿ ಅರ್ಧ ಸಂಖ್ಯೆಯ ಪ್ರೇಷಕಗಳು ಆಗಲೇ ಕೆಲಸ ಮಾಡುತ್ತಿವೆ.
	ಗಣಕ : ಭಾಭಾ ಸಮಿತಿಯ ವರದಿ (1966) ಇನ್ನು ಹತ್ತು ವರ್ಷಗಳಲ್ಲಿ ದೇಶಕ್ಕೆ 16 ದೊಡ್ಡ ಗಣಕಗಳು 500 ಮಧ್ಯಮ ಗಣಕಗಳು ಮತ್ತು 5000 ಸಣ್ಣ ಗಣಕಗಳು ಅಗತ್ಯವೆಂದು ಎಣಿಕೆಹಾಕಿ ಇವುಗಳ ಖರ್ಚು 100ಕೋಟಿ ಎಂದು ಅಂದಾಜು ಮಾಡಿತ್ತು. 1980ರ ತನಕ ದೊಡ್ಡ ಮತ್ತು ಮಧ್ಯಮ ಗಣಕಗಳ ಪೈಕಿ 45ನ್ನು ಸರ್ಕಾರವೂ 45ನ್ನು ಸರ್ಕಾರೀ ಸಂಸ್ಥೆಗಳೂ 30ನ್ನು ಖಾಸಗೀ ಸಂಸ್ಥೆಗಳೂ ಆಮದು ಮಾಡಿಕೊಂಡಿವೆ.
	ಭಾರತದಲ್ಲಿ ದೊಡ್ಡ ಗಣಕಗಳನ್ನು ಯಾರೂ ತಯಾರಿಸುತ್ತಿಲ್ಲ. ಮಧ್ಯಮ ಗಾತ್ರದವನ್ನು ಸರ್ಕಾರದ ಹೈದರಾಬಾದಿನ ಇಅIಐ (ಖಿಆಅ 332) ಮತ್ತು ಇಂಟರ್ ನ್ಯಾಷನಲ್ ಕಂಪ್ಯೂಟರ್ ಇಂಡಿಯನ್ ಮ್ಯಾನ್ಯುಫ್ಯಾಕ್ಚರ್ ಎಂಬ ವಿದೇಶೀ ಬಂಡವಾಳ ಹೊಂದಿರುವ ಸಂಸ್ಥೆ IಅIಒ (Iಅಐ 2904) ತಯಾರಿಸುತ್ತಿವೆ.
	ಇಅIಐ ಸೇರಿದಂತೆ 40 ಸಂಸ್ಥೆಗಳು ಸಣ್ಣ ಗಣಕ, ಮಿನಿಗಣಕ ಮತ್ತು ಸೂಕ್ಷ್ಮ ಗಣಕಗಳನ್ನು ತಯಾರಿಸುತ್ತಿವೆ. ಇವುಗಳ ಒಟ್ಟು ಉತ್ಪಾದನೆ ಸುಮಾರು ರೂ 500ಮಿಲಿಯನ್ ಎಂದು ಅಂದಾಜು.
	ಗಣಕದ ಉಪಯೋಗಕ್ಕೆ ಇತರ ಉಪಕರಣಗಳು (ಪೆರಿಫೆರಲ್ಸ್) ಬೇಕಾಗುತ್ತವೆ. ಇವುಗಳ ತಯಾರಿಕೆಗಾಗಿ 60 ಸಂಸ್ಥೆಗಳಿಗೆ ಮನ್ನಣೆ ಕೊಡಲಾಗಿದ್ದು ಆ ಪೈಕಿ 13 ಈಗ ಉತ್ಪಾದನೆಯಲ್ಲಿ ತೊಡಗಿವೆ. ಇವುಗಳ ಉತ್ಪಾದನೆ ರೂ 45 ಮಿಲಿಯನ್ ಎಂದು ಅಂದಾಜು. ಇವುಗಳಲ್ಲಿ ವೀಡಿಯೊ ಡಿಸ್‍ಪ್ಲೇಟರ್ಮಿನಲುಗಳೂ ಫ್ಲಾಪಿ ಡಿಸ್ಕ್ ಡ್ರೈವ್‍ಗಳೂ ಕಾರ್ಡ್‍ರೀಡರುಗಳೂ ಸೇರಿವೆ. ಗಣಕಕ್ಕೆ ಕಾಗದ ಕಾಂತಪಟ್ಟಿ (ಮ್ಯಾಗ್ನೆಟಿಕ್ ಟೇಪ್) ತಾಂತ್ರಿಕಾಂಶ (ಸಾಫ್ಟ್‍ವೇರ್) ಸಾಧನಗಳು ಬೇಕಾಗುತ್ತವೆ. ಇವುಗಳ ತಯಾರಿಕೆಯೂ ಭಾರತದಲ್ಲಿ ಹೆಚ್ಚಾಗಿಲ್ಲ.
	ಈಗ ತಯಾರಾಗುತ್ತಿರುವ ಗಣಕಗಳು ಹೆಚ್ಚಾಗಿ ಕಚೇರಿ ಮತ್ತು ವಾಣಿಜ್ಯ ಕ್ಷೇತ್ರಗಳಿಗೆ ಉಪಯೋಗವಾಗುವ ಸಂಬಳ ವಿತರಣೆ, ಲೆಕ್ಕಪತ್ರಗಳ ತಯಾರಿಕೆ, ದಾಸ್ತಾನು ಮನೆಗಳ ಉಸ್ತುವರಿ ಇಂಥ ಕೆಲಸಗಳಿಗೆ ಅಗತ್ಯವಾದ ರೀತಿಯವು. ತಂತ್ರವಿದ್ಯೆ, ವಿಜ್ಞಾನ, ಕಾರ್ಖಾನೆಗಳ ಕಾರ್ಯಕ್ರಮ ನಿಯಂತ್ರಣ ಮೊದಲಾದ ಕೆಲಸಗಳಿಗೆ ಬೇಕಾಗುವ ಗಣಕಗಳು ಈಗಲೂ ವಿದೇಶಗಳಿಂದ ಆಮದಾಗುತ್ತಿವೆ. ಇದಕ್ಕೆ ಬದಲಾಗಿ ಸರ್ಕಾರವೇ ದೊಡ್ಡ ಗಣಕಗಳ ತಂತ್ರವಿದ್ಯೆಯನ್ನು ಆಮದು ಮಾಡಿಕೊಳ್ಳಬೇಕೆಂದು ಯೋಚಿಸುತ್ತಿದೆ. ಇದರಿಂದ ಎಲ್ಲ ಸಂಸ್ಥೆಗಳಿಗೂ ಲಾಭ ಉಂಟು.
	ನಿಯಂತ್ರಣ ಮತ್ತು ಕೈಗಾರಿಕಾ ಎಲೆಕ್ಟ್ರಾನಿಕ್ಸ್ : ಉಕ್ಕು ಸಿಮೆಂಟ್ ಸಕ್ಕರೆ ವಿದ್ಯುತ್ತು ಮೊದಲಾದ ಕೈಗಾರಿಕೆಗಳಲ್ಲಿ ವಿವಿಧ ಹಂತಗಳಲ್ಲಿ ನಡೆಯುವ ಕೆಲಸಗಳ ಉಸ್ತುವಾರಿ ಮತ್ತು ನಿಯಂತ್ರಣಕ್ಕೆ ಎಲೆಕ್ಟ್ರಾನಿಕ್ಸ್ ವ್ಯವಸ್ಥೆಗಳು ಉಪಯೋಗವಾಗುತ್ತವೆ. ಈಗ ಹೆಚ್ಚು ಹೆಚ್ಚಾಗಿ ಮೈಕ್ರೊಪ್ರೊಸೆಸರಿನ ಉಪಯೋಗದಿಂತ ಅತಿ ಅಗ್ಗದ,  ಹೆಚ್ಚಿನ ಗುಣಮಟ್ಟದ ಮತ್ತು ಸಣ್ಣ ಗಾತ್ರದ ನಿಯಂತ್ರಣ ವ್ಯವಸ್ಥೆಗಳನ್ನು ತಯಾರಿಸಬಹುದುದಾಗಿದೆ. ಭಾರತದಲ್ಲಿ ಈ ಕ್ಷೇತ್ರದಲ್ಲಿಯೂ ಬೆಳೆವಣಿಗೆ ಕಾಣಬರುತ್ತಿದೆ. ಈ ಕ್ಷೇತ್ರದ ಅಭಿವೃದ್ಧಿಗಾಗಿ ಭಾರತಸರ್ಕಾರದ ಎಲೆಕ್ಟ್ರಾನಿಕ್ಸ್ ಇಲಾಖೆ ಒಂದು ಕಾರ್ಯಕ್ರಮ (ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ ಪ್ರೊಮೋಷನ್ ಪ್ರೋಗ್ರಾಮ್-IಇPP) ಹಮ್ಮಿಕೊಂಡಿದೆ.
	ವಿಶಾಖಪಟ್ಟಣ ಉಕ್ಕು ಕಾರ್ಖಾನೆಗೆ ಬೇಕಾದ ಸಿಸ್ಟಮ್ ಎಂಜಿನಿಯರಿಂಗ್ ಕೆಲಸಗಳನ್ನು ಭಾರತದಲ್ಲಿಯೇ ಉತ್ಪಾದಿಸುವ ಪ್ರಯತ್ನಗಳು ನಡೆದಿವೆ. ಥೈರಿಸ್ಟರ್ ನಿಯಂತ್ರಿತ ಚಾಲಕಯಂತ್ರಗಳು, ತೂಕಮಾಡುವಯಂತ್ರಗಳು, ತರ್ಕ ನಿಯಂತ್ರಗಳು (ಲಾಜಿಕ್ ಕಂಟ್ರೋಲರ್ಸ್). ಪ್ರೋಸೆಸ್ ನಿಯಂತ್ರಣ ಯಂತ್ರಗಳು, ಇನ್‍ಸ್ಟ್ರುಮೆಂಟ್ ಪ್ಯಾನೆಲ್‍ಗಳು ಇತ್ಯಾದಿಗಳನ್ನು ಇಲ್ಲಿಯೇ ತಯಾರಿಸಲಾಗುತ್ತದೆ. ಸೇಲಮ್ ಉಕ್ಕು ಕಾರ್ಖಾನೆ, ರೂರ್ಕೆಲಾ ಕಾರ್ಖಾನೆಗಳಲ್ಲಿ ಇಂಥ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಸಾಮಥ್ರ್ಯ ಈ ದೇಶದಲ್ಲಿಯೇ ಮೈದಳೆದಿದೆ. ಈಗ ಸಿಮೆಂಟ್ ಕೈಗಾರಿಕೆಗಾಗಿ ಸಂಪೂರ್ಣ ಕಾರ್ಖಾನೆಯನ್ನೇ ವಿದೇಶೀ ತಾಂತ್ರಿಕ ಸಹಾಯ ಇಲ್ಲದೆ ಸ್ವದೇಶೀಯವಾಗಿ ನಿರ್ಮಿಸುವ ಸಾಮಥ್ರ್ಯ ಒದಗಿದೆ.
	ನಿಯಂತ್ರಣ ಮತ್ತು ಕೈಗಾರಿಕಾ ಎಲೆಕ್ಟ್ರಾನಿಕ್ಸ್ 1960ರಲ್ಲಿ ಅಸ್ತಿತ್ವದಲ್ಲಿಯೇ ಇರಲಿಲ್ಲ ಎನ್ನಬಹುದು. 1980ರಲ್ಲಿ ರೂ 220 ಮಿಲಿಯನ್ನಿನಷ್ಟು ಉತ್ಪಾದನೆ ಈ ವಿಭಾಗದಲ್ಲಿ ಮುಕ್ಕಾಲು ಕಾರ್ಯ ವ್ಯವಸ್ಥಿತ ಉದ್ಯಮಗಳಲ್ಲಿ ನಡೆಯುತ್ತದೆ. ಇನ್‍ಸ್ಟ್ರುಮೆಂಟುಗಳ ಎಲೆಕ್ಟ್ರಾನಿಕ್ಸಿನಲ್ಲಿ ಅರ್ಧ ಭಾಗವೆಲ್ಲ ಸಣ್ಣ ಕೈಗಾರಿಕೆಗಳಲ್ಲಿದೆ.
	ರೇಡಾರ್ ಮತು ರಕ್ಷಣಾ ಎಲೆಕ್ಟ್ರಾನಿಕ್ಸ್ : ರೇಡಾರುಗಳು ರಕ್ಷಣೆಗೆ ಮಾತ್ರವಲ್ಲದೆ ಹವಾಮಾಪನೆ ಮೊದಲಾದ ಕಾರ್ಯಗಳಲ್ಲಿಯೂ ಉಪಯೋಗವಾಗುತ್ತವೆ. 1983ರಲ್ಲಿ ರೂ 300 ಮಿಲಿಯನ್ ಬೆಲೆಯ ರೆಡಾರ್ ಉಪಕರಣಗಳ ಆಮದಿಗಾಗಿ ಪರವಾನಗಿ ಕೊಡಲಾಯಿತು. ಆದರೆ 3000 ಮಿಲಿಯನ್ ಬೆಲೆಯ ಯಂತ್ರಗಳ ಆಮದಿಗಾಗಿ ಅರ್ಜಿಹಾಕಿದವರಿಗೆ ಭಾರತೀಯ ತಯಾರಕರೊಡನೆ ಸಮಾಲೋಚಿಸಿ ಅಂಥ ಯಂತ್ರಗಳನ್ನು ಇಲ್ಲಿಯೇ ತಯಾರಿಸಿಕೊಳ್ಳಲು ಸಲಹೆ ಮಾಡಲಾಗಿದೆ.
	ಸಾಮಾನ್ಯವಾಗಿ ರಕ್ಷಣಾ ಇಲಾಖೆಗೆ ಅಗತ್ಯವಾದ ಉಪಕರಣಗಳೂ ವ್ಯವಸ್ಥೆಗಳೂ ಅದೇ ಇಲಾಖೆಗೆ ಸೇರಿದ ಭಾರತ್ ಎಲೆಕ್ಟ್ರಾನಿಕ್ಸಿನಲ್ಲಿಯೂ (ಃಇಐ) ಇತರ ಸರ್ಕಾರೀ ಉದ್ಯಮಗಳಲ್ಲಿಯೂ (ಇಛಿIಐ ಇತ್ಯಾದಿ) ತಯಾರಾಗುತ್ತವೆ.  ರಕ್ಷಣಾ ವಿಮಾನಗಳಿಗೆ ಅಗತ್ಯವಾದ ಎಲೆಕ್ಟ್ರಾನಿಕ್ಸ್ ವ್ಯವಸ್ಥೆಗಳನ್ನು ಹಿಂದೂಸ್ಥಾನ್ ಏರೊನಾಟಿಕ್ಸ್‍ನವರೇ ತಮ್ಮ ಹೈದರಾಬಾದಿನ ಕಾರ್ಖಾನೆಯಲ್ಲಿ ತಯಾರಿಸಿಕೊಳ್ಳುತ್ತಾರೆ. ಕೆಲವು ಉಪಕರಣಗಳನ್ನು ಖಾಸಗೀ ಉದ್ಯಮದಲ್ಲಿಯೂ ತಯಾರಿಸಿಕೊಳ್ಳುವ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ಬಾಹ್ಯಾಕಾಶ ಇಲಾಖೆ ಉಪಗ್ರಹಗಳ ತಯಾರಿಕೆಗೂ ಉಪಗ್ರಹವನ್ನು ಉಡಾಯಿಸಿ ಅದನ್ನು ನಿಯಂತ್ರಿಸುವುದಕ್ಕೂ ಎಲೆಕ್ಟ್ರಾನಿಕ್ಸನ್ನು ವಿಪುಲವಾಗಿ ಅವಲಂಬಿಸಿದೆ.  ಈ ಇಲಾಖೆ ಹೊಂದಿರುವ ಉಪಗ್ರಹ ಇನ್‍ಸಾಟ್ Iಃ —ದೂರದರ್ಶನ ಮತ್ತು ದೂರವಾಣಿ ಸಂಸ್ಥೆಗಳಿಗೆ ಅಪಾರ ಬಲ ಕೊಟ್ಟಿದೆ.
	ವೈದ್ಯಕೀಯ ಎಲೆಕ್ಟ್ರಾನಿಕ್ಸ್ : ವೈದ್ಯಕೀಯದಲ್ಲಿ ಎಲೆಕ್ಟ್ರೊಕಾರ್ಡಿಯೊಗ್ರಾಫ್ ಮೊದಲಾದ ಎಲೆಕ್ಟ್ರಾನಿಕ್ಸ್ ಉಪಕರಣಗಳು ಅತಿ ಉಪಯೋಗಕಾರಿಯಾಗಿವೆ. ಭಾರತದಲ್ಲಿ ಈ ಕ್ಷೇತ್ರ ಸಾಮಾನ್ಯವಾಗಿ ಸಣ್ಣ ಕೈಗಾರಿಕೆಗೆ ಸೀಮಿತವಾಗಿದ್ದರೂ ಸೀಮೆನ್ಸ್, ಇಅIಐ ಮೊದಲಾದ ದೊಡ್ಡ ಸಂಸ್ಥೆಗಳು ಕೂಡ ಮಾನವೀಯತೆಯ ಮತ್ತು ಅಂತಸ್ತಿನ ದೃಷ್ಟಿಯಿಂದ ಈ ಉಪಕರಣಗಳನ್ನು ಉತ್ಪಾದಿಸುತ್ತಿವೆ. ಉತ್ಪಾದನೆಯ ಆರ್ಥಿಕ ಮೌಲ್ಯ ಬಲುಕಡಿಮೆಯಾದರೂ ಈ ಉಪಕರಣಗಳ ಉಪಯುಕ್ತತೆ ಹೆಚ್ಚು.
	ಗಣಕವನ್ನು ಉಪಯೋಗಿಸಿ ದೇಹದ ಒಳಗಿನ ಅಂಗೋಪಾಂಗಗಳ ನಕ್ಷೆಯನ್ನು ದೊರಕಿಸುವ ಅಂಖಿ (ಕಂಪ್ಯೂಟರ್ ಏಡೆಡ್ ಟೋಮೊಗ್ರಾಫ್) ಎಂಬ ಜಟಿಲತಮ ಯಂತ್ರವನ್ನು ಚಂಡೀಘಡದ ಸಂಸ್ಥೆಯೊಂದು ವಿದೇಶೀ ತಾಂತ್ರಿಕ ನೆರವಿನಿಂದ ಈಗ ಭಾರತದಲ್ಲಿಯೇ ತಯಾರಿಸುತ್ತಿದೆ.
	ಬಿಡಿಭಾಗಗಳ ಕೈಗಾರಿಕೆ: ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತಯಾರಿಸಬೇಕಾದರೆ ಸಮಾಕಲಿತ ಮಂಡಲ, ಟ್ರಾನ್ಸಿಸ್ಟರ್, ಕೆಪಾಸಿಟರ್ ಮೊದಲಾದ ಬಿಡಿ ಭಾಗಗಳನ್ನು ತಂತಿಗಳಿಂದ ಜೋಡಿಸಬೇಕು. ಆದ್ದರಿಂದ ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಬಿಡಿಭಾಗಗಳೇ ಕಚ್ಚಾಸಾಮಗ್ರಿ. ಬಿಡಿಭಾಗಗಳನ್ನು ತಯಾರಿಸುವ ದೃಢವಾದ ಕೈಗಾರಿಕೆಯೇ ಎಲೆಕ್ಟ್ರಾನಿಕ್ಸ್ ಉದ್ಯಮದ ಮೂಲ. ಆದರೆ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಹೆಚ್ಚಿದ ವೇಗದಲ್ಲಿಯೇ ಬಿಡಿಭಾಗಗಳ ಉತ್ಪಾದನೆ ಮಾತ್ರ ಹೆಚ್ಚಿಲ್ಲ (ಪುಟ 674). ಭಾರತದಲ್ಲಿ ತಯಾರಾಗುವ ಬಿಡಿ ಭಾಗಗಳೆಲ್ಲವೂ ರೇಡಿಯೊ ದೂರದರ್ಶನ ಮೊದಲಾದ ಮನರಂಜನೆಯ ಉಪಕರಣಗಳಿಗೆ ಮಾತ್ರ ತಕ್ಕುದಾಗಿರುವುದೇ ಇದರ ಕಾರಣ, ಔದ್ಯಮಿಕ ಉಪಕರಣಗಳಿಗೆ ಹೆಚ್ಚಿನ ದರ್ಜೆಯ ಬಿಡಿಭಾಗಗಳ ಅಗತ್ಯ ಇದೆ. ಇವುಗಳ ಪೈಕಿ ಹೆಚ್ಚ್ಚಿನವು ಆಮದಾಗಿ ಬರುತ್ತಿವೆ. ಈ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಕಾರ್ಯಾನಿರತವಾಗಿದೆ. ಈಗ (1983-84) ಕೇವಲ ರೂ 2,300 ಬೆಲೆಯ ಉತ್ಪಾದನೆ ಹೊಂದಿರುವ ಈ ಕ್ಷೇತ್ರ ಇನ್ನು ಆರೇಳು ವರ್ಷಗಳಲ್ಲಿ ಇದರ ಹಲವು ಪಟ್ಟು ಹೆಚ್ಚಿನ ಉತ್ಪಾದನೆಯನ್ನು ತೋರಿಸಬೇಕಾಗಿದೆ. ಇದಕ್ಕಾಗಿ ಸುಮಾರು ರೂ 4-5 ಸಾವಿರ ಮಿಲಿಯನ್ ಅಧಿಕ ಬಂಡವಾಳ ಹೂಡಬೇಕಾಗುತ್ತದೆ.  ಮುಖ್ಯವಾಗಿ ದೂರದರ್ಶನ, ಅಂಕಾತ್ಮಕ ಸಂಪರ್ಕಸಾಧೆನೆಗಳಿಗೆ ಅಗತ್ಯವಾದ ಸ್ವಿಚಿಂಗ್ ಬಿಡಿಭಾಗಗಳು ಮತ್ತು ಗಣಕಗಳಿಗೆ ಬೇಕಾದ ಬಿಡಿಭಾಗಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಬೇಕಾಗಿದೆ.
	1983ರಲ್ಲಿ 500,000 ಕರಿ ಬಳಿ ದೂರದರ್ಶನ ಚಿತ್ರನಳಿಗೆಗಳ ಸಾಮಥ್ರ್ಯ ಹೊಸದಾಗಿ ಸ್ಥಾಪಿಸಲ್ಪಟ್ಟಿತು. ಭಾರತ್ ಎಲೆಕ್ಟ್ರಾನಿಕ್ಸ್ ತಲೋಜದಲ್ಲಿ ದೂರದರ್ಶನ ಚಿತ್ರನಳಿಗೆಗಳ ಕಾರ್ಖಾನೆಯನ್ನು ನಿರ್ಮಿಸುತ್ತಿದೆ. ಇದು 1985ರಲ್ಲಿ ಉತ್ಪಾದನೆ ಆರಂಭಮಾಡಬಹುದು. ರೂ 400 ಮಿಲಿಯನ್ ಬಂಡವಾಳದ ಈ ಸಂಸ್ಥೆ 1-2 ಮಿಲಿಯನ್ ಕರಿ ಬಿಳಿ ದೂರದರ್ಶನ ಚಿತ್ರನಳಿಗೆಗಳ ನಿರ್ಮಾಣ ಸಾಮಥ್ರ್ಯದ ಹೊಂದಿದೆ. ಚಂಡೀಘಡದಲ್ಲಿ ರೂ 750 ಮಿಲಿಯನ್ ಬಂಡವಾಳದ ಸೆಮಿಕಂಡಕ್ಟರ್ ಕಾಂಪ್ಲೆಕ್ಸ್ ಲಿಮಿಟೆಡ್ (Sಅಐ) ಎಂಬ ಅತ್ಯಾಧುನಿಕ ಕಾರ್ಖಾನೆ ಸಿದ್ಧವಾಗುತ್ತಿದೆ. ಅಮೆರಿಕದ ತಂತ್ರವಿದ್ಯೆಯ ಸಹಾಯದಿಂದ ಇಲ್ಲಿ ಐSI ಚಿಪ್‍ಗಳ ತಯಾರಿಕೆ ಆಗುತ್ತಿದೆ. ಐSI ಎಂದರೆ ಲಾರ್ಜ್ ಸ್ಕೇಲ್ ಇಂಟೆ ಗ್ರೇಷನ್-ಸಣ್ಣ (ಸುಮಾರು 5 ಮಿಮೀ x 5 ಮಿಮೀ) ಚಿಪ್‍ನ ಮೇಲೆ ಹಲವು ಸಹಸ್ರ ಟ್ರಾನ್ಸಿಸ್ಟರುಗಳನ್ನು ಹೊಂದಿರುವಂತೆ ತಯಾರಿಸುವ ಸಮಾಕಲಿತ ಮಂಡಲಗಳ ತಂತ್ರವಿದ್ಯೆ. ಐSI ಈಗ ಗಣಕಗಳ, ಅಂಕಾತ್ಮಕ ಸಂಪರ್ಕ ಸಾಧನಗಳ, ಗಡಿಯರ ಮತ್ತು ಗಣನಕಾರಿಗಳ ಹೃದಯ.
	ಸಮಾಕಲಿತ ಮಂಡಲ, ಟ್ರಾನ್ಸಿಸ್ಟರ್, ಬಿಸಿಲಿನಿಂದ ವಿದ್ಯುತ್ತು ಉತ್ಪಾದಿಸುವ ಪೋಟೊವೋಲ್ಟೈಕ್‍ಸೆಲ್ ಇವುಗಳಿಗೆಲ್ಲ ಪರಿಶುದ್ಧ ಸಿಲಿಕಾನ್ ಅಗತ್ಯ. ಇದನ್ನು ತಯಾರಿಸಲು ಬರೋಡದಲ್ಲಿ ರೂ 900 ಮಿಲಿಯನ್ ಬಂಡವಾಳದ ನ್ಯಾಷನಲ್ ಸಿಲಿಕಾನ್ ಫೆಸಿಲಿಟಿ (ಓSಈ) ಎಂಬ ಸಂಸ್ಥೆ ಆರಂಭವಾಗಿದೆ. ಇಲ್ಲಿ ಬಿಲಿಯನ್ ಭಾಗದಲ್ಲಿ ಒಂದು ಭಾಗ ಮಾತ್ರ ಅಶುದ್ಧತೆ ಇರುವ ಅತಿಪರಿಶುದ್ಧ ಸಿಲಿಕಾನ್ ತಯಾರಾಗುತ್ತದೆ. 200 ಟನ್ ಸಾಮಥ್ರ್ಯದ ಈ ಕಾರ್ಖಾನೆಗೆ ಡೌಕಾರ್ನಿಂಗ್ (ಅಮೆರಿಕ) ತಂತ್ರ ವಿದ್ಯೆಯನ್ನು ಕೊಳ್ಳಲಾಗಿದೆ.
	ಹೀಗೆ ಈ ತನಕ ಜಪಾನ್, ಅಮೆರಿಕಾಗಳಿಂದ ಆಮದಾಗುತ್ತಿದ್ದ ಐSI ಚಿಪ್‍ಗಳನ್ನು ದೇಶದಲ್ಲಿಯೇ ತಯಾರಿಸುವುದು ಈಗ ಸಾಧ್ಯವಾಗಿದೆ. ಈಗಾಗಲೇ ಚಂಡೀಘಡದಲ್ಲಿ ಐSIಗಳು ಸಣ್ಣ ಪ್ರಮಾಣದಲ್ಲಿ ತಯಾರಾಗಿವೆ. ಹೀಗಾಗಿ, ಹಳೆತಾದ ತಂತ್ರವಿದ್ಯೆಯ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುವುದರ ಬದಲಾಗಿ ನಾವೇ ಅತ್ಯಾಧುನಿಕ ಬಿಡಿಭಾಗಗಳನ್ನು ನಿರ್ಮಿಸಬಹುದಾಗಿದೆ. ತಂತ್ರವಿದ್ಯೆಯನ್ನು ಕೇಂದ್ರ ಸರ್ಕಾರವೇ ಆಮದು ಮಾಡಿಕೊಂಡರೆ ಅದರ ಲಾಭ ಎಲ್ಲರಿಗೂ, ಅದರಲ್ಲೂ ಸಣ್ಣಕೈಗಾರಿಕೆದಾರರಿಗೆ, ದೊರೆಯುತ್ತದೆ. ಈಗ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉದ್ಯಮದ ಸರಪಣಿಯಲ್ಲಿ ಅತಿ ದುರ್ಬಲ ಕೊಂಡಿ ಬಿಡಿಭಾಗಗಳ ಉದ್ಯಮ. ಇದನ್ನು ಅತಿ ಶೀಘ್ರದಲ್ಲಿಯೇ ಬಲಪಡಿಸಬೇಕು.
	ರಫ್ತು ವ್ಯಾಪಾರ: ಭಾರತದ ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ರಫ್ತು ಗೌಣಸ್ಥಾನ ಪಡೆದಿದೆ. ಅಗತ್ಯವಾದ ಬಿಡಿ ಭಾಗಗಳನ್ನು ಸುಂಕತೆತ್ತು ಇಲ್ಲಿ ಉತ್ಪಾದನಾ ಶ್ರೇಣಿ ಬಲು ಕಡಿಮೆಯಾಗಿರುವುದರಿಂದಲೂ ಇಲ್ಲಿಯ ಮಾರಾಟ ಬೆಲೆ ತೀರದುಬಾರಿ. ಈ ಬೆಲೆಯಲ್ಲಿ ವಿದೇಶೀಯರು ಇಲ್ಲಿಯ ತಯಾರಿಕೆಗಳನ್ನು ಖರೀದಿಸುವುದಿಲ್ಲ. ಹೀಗಾಗಿ ರಫ್ತು ಕೆಲವು ಕಿರಿದಾದ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿ ಮುಂಬಯಿಯಲ್ಲಿ ವಿಮಾನನಿಲ್ದಾಣದ ಹತ್ತಿರ ಸಾಂತಾಕ್ರುಜ್ ಎಲೆಕ್ಟ್ರಾನಿಕ್ಸ್ ರಪ್ತು ಉತ್ತೇಜನ ವಲಯ (SಇಇPZ) ಏರ್ಪಾಡಾಗಿದೆ. ದೇಶದ ಇತರ ಭಾಗಗಳಿಂದ ಪ್ರತ್ಯೇಕ ಮಾಡಲಾದ ಈ ಪ್ರದೇಶದಲ್ಲಿರುವ ನೂರಾರು ಸಣ್ಣ ಕಾರ್ಖಾನೆಗಳಿಗೆ ಆಮದು-ರಫ್ತು ಸುಂಕ ಇರುವುದಿಲ್ಲ. ಇದೊಂದು ಸುಂಕರಹಿತ ಕ್ಷೇತ್ರ. ಈ ಪ್ರಯೋಗ ಯಶಸ್ವಿಯಾಗಿದೆ. ಭಾರತದ ರಫ್ತು ವ್ಯಾಪಾರದ ಹೆಚ್ಚಿನ ಭಾಗ ಈಗ SಇಇPZ ಮೂಲಕವೇ ನಡೆಯುತ್ತಿವೆ. 1980ರಲ್ಲಿ ರೂ 170 ಮಿಲಿಯನ್ ಬೆಲೆಯ ವಸ್ತುವನ್ನು ರಫ್ತು ಮಾಡಿತು.  ಇದಕ್ಕೆ ಹೋಲಿಸಿದರೆ ಇಡೀ ದೇಶದ ಇತರ ಭಾಗಗಳೆಲ್ಲದರಿಂದ 1980ರಲ್ಲಿ ರೂ 250 ಮಿಲಿಯನ್ ಇದ್ದ ರಫ್ತು ವ್ಯಾಪಾರ 1983ರಲ್ಲಿ ರೂ 390 ಮಿಲಿಯನ್ನಿಗೆ ಏರಿದೆ. ರಫ್ತು ವ್ಯಾಪಾರವನ್ನು ಹೆಚ್ಚಿಸುವುದಕ್ಕಾಗಿ ಬೆಂಗಳೂರು. ಮದರಾಸುಗಳಲಿಯೂ ರಫ್ತು ಉತ್ತೇಜಕ ವಲಯಗಳನ್ನು ನಿರ್ಮಿಸಬೇಕೆಂಬ ಬೇಡಿಕೆ ಬಂದಿದೆ. ಇದರಿಂದ ರಫ್ತು ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ.
	ಸಂಶೋಧನೆ ಮತ್ತು ಅಭಿವೃದ್ಧಿ: ಒಂದು ದೇಶದ ಎಲೆಕ್ಟ್ರಾನಿಕ್ಸ್ ಉದ್ಯಮ ಪ್ರಗತಿಹೊಂದಬೇಕಾದರೆ ಅದು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ (ರಿಸರ್ಚ್ ಅಂಡ್ ಡೆವಲಪ್‍ಮೆಂಟ್, ಖ&ಆ) ಹೆಚ್ಚಿನ ಪ್ರಯತ್ನವನ್ನೂ ಹಣವನ್ನೂ ಹೂಡಬೇಕಾಗುತ್ತದೆ. ಅಮೆರಿಕಾ ಮತ್ತು ಜಪಾನ್ ಈ ಕ್ಷೇತ್ರದಲ್ಲಿ ಇಷ್ಟು ಮುಂದೆ ಬಂದಿರುವುದು. ಈ ಕಾರಣದಿಂದ ಭಾರತದಲ್ಲಿ ಈ ತನಕ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಮೀಸಲಾದ ಕೆಲವು ಪ್ರಯೋಗಾಲಯಗಳನ್ನು ಹೊಂದಿವೆ. ಸರ್ಕಾರದ ಎಲೆಕ್ಟ್ರಾನಿಕ್ಸ್ ಇಲಾಖೆ ವಿವಿಧ ಸಂಸ್ಥೆಗಳಲ್ಲಿ ಹಲವು ಯೋಜನೆಗಳನ್ನು ಆರಂಭಮಾಡಿ ಅವುಗಳಿಗೆ ಧನಸಹಾಯ ಮಾಡುತ್ತಿದೆ. 1973ರಿಂದ ಟೆಕ್ನಾಲಜಿ ಡೆವಲಪ್‍ಮೆಂಟ್, ಕೌನ್ಸಿಲ್ 75 ಸಂಸ್ಥೆಗಳಲ್ಲಿ 260 ಯೋಜನೆಗಳನ್ನು ಮಂಜೂರು ಮಾಡಿದೆ. ಇವುಗಳ ಪೈಕಿ ಸುಮಾರು 160 ಮುಗಿದಿವೆ. ಇಲ್ಲಿಯತನಕ ಸುಮಾರು ರೂ 320 ಮಿಲಿಯನ್ ಖರ್ಚಾಗಿವೆ. ಅರ್ಧಾಂಶ ಯೋಜನೆಗಳು ಉತ್ಪಾದನೆಯ ಹೆಚ್ಚಳಕ್ಕಾಗಿಯೂ ಉಳಿದ ಅರ್ಧಾಂಶ ಖ&ಆ ಗಾಗಿಯೂ ಉದ್ದೇಶಿತವಾಗಿವೆ, ನ್ಯಾಷನಲ್ ರೇಡಾರ್ ಕೌನ್ಸಿಲ್ (ಓಖಅ) ಇನ್ನೊಂದು ಸಂಸ್ಥೆ, ರೇಡಾರ್ ನ್ಯವಿಗೆಷನ್ ಸಹಾಯಕ ವ್ಯವಸ್ಥೆಗಳು, ಅತಿರಕ್ತ ಮತ್ತು ಲೇಸರ್ ವ್ಯವಸ್ಥೆಗಳನ್ನು ಕುರಿತ ಸಂಶೋಧನೆಗಳ ಉಸ್ತುವಾರಿಯನ್ನು ಓಖಅ ನೋಡುತ್ತಿದೆ.
	ಸಂಪರ್ಕಸಾಧನೆಗಳ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ಸ್ ಸ್ವಿಚಿಂಗ್‍ಸಿಷ್ಟಮ್ ಈಗ ಬಹಳ ಅಗತ್ಯವಾಗಿದೆ. ಇದಕ್ಕಾಗಿ ವಿದೇಶೀ ತಂತ್ರವಿದ್ಯೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇದನ್ನು ಭಾರತದಲ್ಲಿ ಉಪಯೋಗಕ್ಕೆ ತರಲು ಒಂದು ಸಂಸ್ಥೆಯ ರಚನೆ ಆಗುತ್ತಿದೆ. ಈ ಯೋಜನೆಗಾಗಿ ರೂ 200 ಮಿಲಿಯನ್ ವಿದೇಶೀ ವಿನಿಮಯ ಮತ್ತು ರೂ 150 ಮಿಲಿಯನ್ ದೇಶೀಯ ಖರ್ಚು ಮಂಜೂರಾಗಿದೆ.
	ಐSI ಮತ್ತು ಇನ್ನೂ ಹೆಚ್ಚಿನ ಜಟಿಲತೆಯ ಗಿಐSI ಸಂಶೋಧನೆ ಪಿಲಾನಿಯ ಅಇಇಖI, ದೆಹಲಿಯ SSPಐ, ಮುಂಬಯಿಯ ಖಿIಈಖ ಹಾಗೂ IIಖಿ, ಮತ್ತು ಬೆಂಗಳೂರಿನ IIS ಸಂಸ್ಥೆಗಳಲ್ಲಿ ನಡೆಯುತ್ತಿದೆ. ಃಇಐ ಮತ್ತು IಖಿI ಕೂಡ ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿವೆ.
	ಚಂಡೀಘಡದ Sಅಐನಲ್ಲಿ 32ಞಊzನ ಗಡಿಯಾರದ ಚಿಪ್ ಮತ್ತು ಇತರ ಐSI ಚಿಪ್‍ಗಳನ್ನು ತಯಾರಿಸಿದೆ. ಚಿಪ್‍ನಲ್ಲಿ ಪ್ರತಿಯೊಂದು ಟ್ರಾನ್ಸಿಸ್ಟರಿಗೂ 5 ಮೈಕ್ರಾನ್ ತಂತ್ರವನ್ನು ಉಪಯೋಗಿಸಲಾಗುತ್ತಿದೆ. ಗಿಂಐSIಗೆ ಅಗತ್ಯವಾದ 3 ಮೈಕ್ರಾನ್ ತಂತ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರೇಡಾರ್ ಮತ್ತು ಸೂಕ್ಷ್ಮತರಂಗ ವ್ಯವಸ್ಥೆಗಳಿಗೆ ಅಗತ್ಯವಾದ ಕ್ಲೈಸ್ಟ್ರಾನ್ ಮತ್ತು ಸಂಚಾರೀ ಅಲೆ ನಳಿಗೆಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಕೆಲಸವನ್ನು ಬೆಂಗಳೂರಿನ ಃಇಐನಲ್ಲಿ ನಡೆಸಲು ಯೋಜಿಸಲಾಗಿದೆ. ಗಣಕಗಳಿಗೆ ಅಗತ್ಯವಾದ ತಾಂತ್ರಿಕಾಂಶ (ಸಾಫ್ಟ್‍ವೇರ್) ಸಾಮಾನುಗಳ ಖ&ಆ ಗಾಗಿ ಮುಂಬಯಿಯ ಖಿIಈಖನಲ್ಲಿ ಒಂದು ಸಂಸ್ಥೆ ಕೆಲಸಮಾಡುತ್ತಿದೆ.
	ಗುಣದರ್ಜೆಯ ಭರವಸೆ: ಆಧುನಿಕ ಉದ್ಯಮಗಳಲ್ಲಿ ತಯಾರಾದ ವಸ್ತುಗಳ ಗುಣದರ್ಜೆಯನ್ನು ರಕ್ಷಿಸುವುದು ಅತಿ ಅಗತ್ಯ. ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಇದು ಅತಿಮುಖ್ಯ ಸಂಗತಿ. ಗುಣದರ್ಜೆ ಕಾಪಾಡಲು ಅಧಿಕ ಶ್ರಮವಹಿಸಿದಷ್ಟೂ ಉತ್ಪಾದಿತ ಉಪಕರಣಗಳಲ್ಲಿ ಬಳಕೆದಾರನ ಭರವಸೆ ಹೆಚ್ಚುತ್ತದೆ. ಇದರಿಂದಲೇ ಇಂದು ಜಪಾನಿನಲ್ಲಿ ತಯಾರಾದ ಉಪಕರಣಗಳಿಗೆ ಅಧಿಕ ಬೇಡಿಕೆ ಇರುವುದಾಗಿದೆ. ಕಚ್ಚಾಮಾಲಿನಿಂದ ಹಿಡಿದು ಬಿಡಿಭಾಗಗಳು ಮತ್ತು ವಿವಿಧ ಭಾಗಗಳು ಎಲ್ಲವನ್ನೂ ಪ್ರತಿ ಹಂತದಲ್ಲಿಯೂ ಕಠಿಣ ಪರೀಕ್ಷೆಗೆ ಒಳಪಡಿಸಿದರೆ ವಿಶ್ವಾಸಾರ್ಹ ಉತ್ಪನ್ನಗಳು ದೊರೆಯುತ್ತದೆ. ರಕ್ಷಣಾ ಪಡೆದಳಿಗೆ ಅಗತ್ಯವಾದ ಉಪಕರಣಗಳಿಗೆ ಮೊದಲಿನಿಂದಲೂ ಪರೀಕ್ಷೆನಡೆಸುವ ಸಂಸ್ಥೆಗಳಿವೆ. ಎಲೆಕ್ಟ್ರಾನಿಕ್ಸ್ ಉಪಕರಣಗಳ ಪರೀಕ್ಷೆಗೆ ಬೆಂಗಳೂರಿನ ಅIಐ ಸಂಸ್ಥೆಯೇ ಮುಖ್ಯ ಕಛೇರಿ. ದೊಡ್ಡ ದೊಡ್ಡ ಉತ್ಪಾದಕ ಸಂಸ್ಥೆಗಳಲ್ಲಿ ಸ್ವಂತ ಪರೀಕ್ಷಾ ವಿಭಾಗಗಳು ಇರುತ್ತವೆ. ಬಿಡಿಭಾಗಗಳ ಪರೀಕ್ಷೆಗಾಗಿ ಇಂಡಿಯನ್ ಸ್ಟಾಂಡರ್ಡ್ ಇನ್‍ಸ್ಟಿಟ್ಯೂಟ್‍ನವರೂ ರಕ್ಷಣಾ ಮಂತ್ರಾಲಯದ ಸ್ಯಾಂಡಡ್ರ್ಸ್ ಸಂಸ್ಥೆಯವರೂ ಸಹಸ್ರಾರು ಪರೀಕ್ಷಾ ವ್ಯವಸ್ಥೆಗಳನ್ನು ರೂಪಿಸಿದ್ದಾರೆ. ಉತ್ಪಾದಿತ ಉಪಕರಣಗಳು ವಿವಿಧ ವಾತಾವರಣ, ಉಪಯೋಗದ ಏರುಪೇರುಗಳು, ಸಾಗಣೆಯ ಧಕ್ಕೆಗಳು ಮುಂತಾದವನ್ನು ಎದುರಿಸಿದಾಗಲೂ ಕಾರ್ಯಕ್ಷಮತೆಯನ್ನು ಹೊಂದಿರುವುದೇ ಎಂಬುದನ್ನು ಪರೀಕ್ಷಿಸಲು ವ್ಯವಸ್ಥೆಗಳು ರೂಪಿತವಾಗಿದೆ. ಸಣ್ಣ ಕೈಗಾರಿಗಳಿಗೂ ಕುಟ್ಟುನಿಟ್ಟಾದ ಪರೀಕ್ಷಾ ಕ್ರಮಗಳನ್ನು ನಿಬಂಧಿಸಿದರೆ ಎಲೆಕ್ಟ್ರಾನಿಕ್ಸ್ ಉಪಕರಣಗಳ ಗುಣದರ್ಜೆ ಉತ್ತಮವಾಗುತ್ತದೆ..
	ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಕೆಲವು ಸಂಸ್ಥೆಗಳು: ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಸಹಸ್ರಾರು ಸಂಸ್ಥೆಗಳಿವೆ. ಇವುಗಳಲ್ಲಿ ಕೆಲವು ದೊಡ್ಡವು, ಅನೇಕವು ಮಧ್ಯಮ ವರ್ಗದವು. ಬಲುಮಟ್ಟಿಗೆ ಸಣ್ಣಕೈಗಾರಿಕೆ ಗೃಹ ಉದ್ಯಮವಾಗಿಯೂ ಇದೆ. ಇವುಗಳ ಪೈಕಿ ಕೆಲವು ಸಂಸ್ಥೆಗಳ ಸ್ಥೂಲ ಪರಿಚಯ ಮಾಡಿಕೊಂಡರೆ ಈ ಉದ್ಯಮದ ಒಂದು ಚಿತ್ರ ದೊರೆಯುತ್ತದೆ.
	ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟಡ್ (ಃಇಐ): ರಕ್ಷಣಾಮಂತ್ರಾಲಯದ ಅಧೀನದಲ್ಲಿ ಮುಖ್ಯವಾಗಿ ರಕ್ಷಣಾಪಡೆಗಳಿಗೆ ಅಗತ್ಯವಾದ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳನ್ನೂ ಉಪಕರಣಗಳನ್ನೂ ಉತ್ಪಾದಿಸುವುದಕ್ಕಾಗಿ ಇದನ್ನು 1954ರಲ್ಲಿ ಸ್ಥಾಪಿಸಲಾಯಿತು. ರೂ 69.6 ಮಿಲಿಯನ್ ಬಂಡವಾಳದಿಂದ ಸ್ಥಾಪಿತವಾದ ಈ ಸಂಸ್ಥೆಯಲ್ಲಿ ಈಗ ಪಾಲುಬಂಡವಾಳ ರೂ 150 ಮಿಲಿಯನ್ ಸೇರಿ ಒಟ್ಟು ಬಂಡವಾಳ ಹೂಡಿಕೆ ರೂ 1155.8 ಮಿಲಿಯನ್. 1982-83ರಲ್ಲಿ ರೂ 234.6 ಮಿಲಿಯನ್ ಲಾಭ ಸಂಪಾದಿಸಿತು. ಈಗ ಇದರಲ್ಲಿ ಸುಮಾರು 18,000 ಕೆಲಸಗಾರರಿದ್ದಾರೆ.  ಬೆಂಗಳೂರು, ಫಜಿಯಬಾದುಗಳಲ್ಲಿ ಅಲ್ಲದೆ ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದಲ್ಲಿಯೂ (ಆಂಧ್ರ ಸೈಂಟಿಫಿಕ್ ಕಂಪನಿ) ಕಾರ್ಯ ಆರಂಭಿಸಿದೆ.
	ರೇಡಿಯೂ ಮತ್ತು ಎಕ್ಸ್‍ಕಿರಣಕವಾಟಗಳು, ಟ್ರಾನ್ಸಿಸ್ಟರ್ ಸಮಾಲಿತಮಂಡಲಗಳು, ದೂರದರ್ಶನ ಚಿತ್ರನಳಿಗೆಗಳು ಮೊದಲಾದ ಬಿಡಿಭಾಗಗಳನ್ನು ಃಇಐ ಮೊದಲಿನಿಂದಲೂ ತಯಾರಿಸುತ್ತ ಬಂದಿದೆ. ವಿವಿಧ ಆವರ್ತಾಂಕಗಳಲ್ಲಿ (ಊಈ, ಗಿಊಈ, Uಊಖ, ಸೂಕ್ಷ್ಮ ತರಂಗ, ರೇಡಿಯೊ) ಪ್ರೇಷಕ, ಅಭಿಗ್ರಾಹಕ ಟ್ರಾನ್ಸ್ ರಿಸೀವರುಗಳನ್ನೂ ರೇಡಿಯೊ ಮತ್ತು ದೂರದರ್ಶನಕೇಂದ್ರ ವ್ಯವಸ್ಥೆಗಳನ್ನೂ ರೇಡಾರ್ ಮತ್ತು ಅದರ ಸಂಬಂಧದ ಉಪಕರಣಗಳನ್ನೂ ದ್ರವಸ್ಪಟಿಕ ಉಪಕರಣಗಳನ್ನೂ ಕ್ವಾಟ್ರ್ಸ್‍ಸ್ಫಟಿಕಗಳನ್ನೂ ತಯಾರಿಸುತ್ತಿದೆ. ಇವುಗಳ ಜೊತೆಗೆ ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನೂ ಸೂಕ್ಷ್ಮದರ್ಶಕಗಳನ್ನೂ ಇದು ತಯಾರಿಸುತ್ತಿದೆ. ಹಿಂದೆ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉದ್ಯಮ ಎಂದರೆ ಃಇಐ ಎಂದೇ ಭಾವನೆ ಇತ್ತು. ಈಗಲೂ ಈ ಉದ್ಯಮದಲ್ಲಿ ಇದೇ ಮುಂಚೂಣಿಯಲ್ಲಿದೆ. 1982-83ರಲ್ಲಿ ಉತ್ಪಾದನೆ ರೂ 1,445 ಮಿಲಿಯನ್.
	ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಅಫ್ ಇಂಡಿಯಾ ಲಿಮಿಟೆಡ್, ಇಅIಐ: ಹೈದರಾಬಾದಿನಲ್ಲಿ ಪರಮಾಣು ಶಕ್ತಿ ವಿಭಾಗದ ಅಂಗವಾಗಿ ಃಂಖಅ ಮೊದಲಾದ ಸಂಸ್ಥೆಗಳಲ್ಲಿ ಅಭಿವೃದ್ಧಿ ಆದ ಉಪಕರಣಗಳ ವಾಣಿಜ್ಯ ಉತ್ಪಾದನೆಗಾಗಿ ಈ ಸಂಸ್ಥೆ ಸ್ಥಾಪಿತವಾಯಿತು (1967). ಇದರ ಪಾಲು ಬಂಡವಾಳ ರೂ 143.5 ಮಿಲಿಯನ್, ಒಟ್ಟು ಬಂಡವಾಳ ರೂ 448.2 ಮಿಲಿಯನ್. 1983ರಲ್ಲಿ ಲಾಭ ರೂ 18.7 ಮಿಲಿಯನ್. ಕೆಲಸಗಾರರ ಸಂಖ್ಯೆ 1718. ಈ ಸಂಸ್ಥೆ 250ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ತಯಾರಿಸುತ್ತದೆ. ನಿಯಂತ್ರಣ ವ್ಯವಸ್ಥೆಗಳು (ನ್ಯೂಕ್ಲಿಯರ್ ಪವರ್ ಪ್ಲಾಂಟ್ ಇನ್‍ಸ್ಟ್ರುಮೆಂಟೇಷನ್ ವ್ಯವಸ್ಥೆಗಳು. ವಿದ್ಯುದಾಗಾರದ ಇನ್‍ಸ್ಟ್ರುಮೆಂಟ್ ವ್ಯವಸ್ಥೆಗಳು), ಪ್ರೋಸೆಸ್ ನಿಯಂತ್ರಣ ವ್ಯವಸ್ಥೆಗಳು, ಪೆಟ್ರೊಕೆಮಿಕಲ್, ಗೊಬ್ಬರ, ಪೆಟ್ರೋಲಿಯಮ್, ಉಕ್ಕು ಕಾರ್ಖಾನೆಗಳ ಇನ್‍ಸ್ಟ್ರುಮೆಂಟ್ ವ್ಯವಸ್ಥೆಗಳು, ಗಣಕ ವ್ಯವಸ್ಥೆಗಳು (ವಿವಿಧ ವಾಣಿಜ್ಯ, ಕೈಗಾರಿಕೆ ವಿಜ್ಞಾನ, ರಕ್ಷಣೆ, ಬಾಹ್ಯಾಕಾಶತಂತ್ರಗಳಿಗೆ ಅಗತ್ಯವಾದ ಸಣ್ಣ ಮತ್ತು ಮಧ್ಯಮ ದರ್ಜೆಯ ಗಣಕಗಳು). ಸಂಪರ್ಕಸಾಧನೆ ವ್ಯವಸ್ಥೆ (ಊಈ, ಗಿಊಈ, Uಊಈ  ರೇಡಿಯೋ ಟ್ರಾನ್ಸ್‍ರಿ ಸೀವರುಗಳು, ರೇಡಿಯೊಟೆಲಿಫೋನ್, ಪೋಲೀಸ್ ರೇಡಿಯೋ, ರಕ್ಷಣಾಪಡೆಗಳ ರೇಡಿಯೊಗಳು, ಚಿತ್ರಗಳ ಟಾನ್ಸ್‍ರಿಸೀವರುಗಳು, ಆಂಟೆನಾಗಳು), ನ್ಯೂಕ್ಲಿಯರ್ ಮತ್ತು ಇತರ ಇನ್‍ಸ್ಟ್ರುಮೆಂಟುಗಳು, ದೂರದರ್ಶನ (ವರ್ಣ ಮತ್ತು ಕರಿ ಬಿಳಿ), ಬಿಡಿಭಾಗಗಳು, ಇತ್ಯಾದಿ. 1982-83ರಲ್ಲಿ ಉತ್ಪಾದನೆ ರೂ. 604 ಮಿಲಿಯನ್.
	ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ (IಖಿI); ಭಾರತ ಸರ್ಕಾರದ ಪೋಸ್ಟ್ ಮತ್ತು ಟೆಲಿಗ್ರಾಫ್ ಇಲಾಖೆಗೆ ಬೇಕಾದ ದೂರವಾಣಿ ವ್ಯವಸ್ಥೆಗಳ ತಯಾರಿಕೆಗಾಗಿ 1948ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾದ ಈ ಸಂಸ್ಥೆ ಸ್ವತಂತ್ರ ಭಾರತದ ಮೊದಲ ಸರ್ಕಾರೀ ಉದ್ಯಮ. ಪಾಲು ಬಂಡವಾಳ ರೂ. 300 ಮಿಲಿಯನ್, ಒಟ್ಟು ತೊಡಗಿಸಿರುವ ಬಂಡವಾಳ ರೂ. 2,445 ಮಿಲಿಯನ್. 1983 ರಲ್ಲಿ ಸಂಪಾದಿಸಿದ ಲಾಭ ರೂ 181 ಮಿಲಿಯನ್. ಕೆಲಸಗಾರರ ಸಂಖ್ಯೆ 27,325. 1982-83 ಉತ್ಪಾದನೆ ರೂ 1876 ಮಿಲಿಯನ್.
	ಈಗ ಆರು ಸ್ಥಳಗಳಲ್ಲಿ IಖಿI ಕಾರ್ಖಾನೆಗಳು ಇವೆ. ಬೆಂಗಳೂರು, ನೈನಿ, ರಾಯ್‍ಬರೇಲಿ, ಶ್ರೀನಗರ, ಪಾಲ್ಘಾಟ್ ಮತ್ತು ಮಂಕಾಪುರ. ವಿವಿಧ ರೀತಿಯ ದೂರವಾಣಿ ಯಂತ್ರಗಳು, ವಿನಿಮಯ ಕೇಂದ್ರಗಳು (ಸ್ಟ್ರೌಗರ್, ಕ್ರಾಸ್‍ಬಾರ್, ಎಲೆಕ್ಟ್ರಾನಿಕ್ಸ್), ಟೆಲೆಕ್ಸ್ ಯಂತ್ರಗಳು, ಕೇಬಲ್ ಕ್ಯಾರಿಯರ್, ಸೂಕ್ಷ್ಮತರಂಗ ಉಪಗ್ರಹ ಸಂಪರ್ಕ ಕೇಂದ್ರ, ರಕ್ಷಣಾ ಪಡೆಗಳ ದೂರವಾಣಿ, ರೇಡಿಯೋ, ರಸ್ತೆಯ ವಾಹನ ಸಂಜ್ಞೆಗಳು ಇತ್ಯಾದಿ ಇವುಗಳಲ್ಲಿ ಉತ್ಪಾದಿತವಾಗುವ ವ್ಯವಸ್ಥೆಗಳು.
	ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಅಇಐ) : ದೆಹಲಿ ಹತ್ತಿರ ಇರುವ ಘಸಿಯಾಬಾದ್ದಿನಲ್ಲಿ 1974ರಲ್ಲಿ ಈ ಸರ್ಕಾರಿ ಸ್ವಾಮ್ಯದ ಸಂಸ್ಥೆ ಸ್ಥಾಪಿತವಾಯಿತು. ಇದು ಅSIಖ ಮತ್ತು ಃಂಖಅ ಪ್ರಯೋಗಾಲಯಗಳಲ್ಲಿ ಜನಿತವಾದ ತಂತ್ರವಿದ್ಯೆಯ ಉಪಯೋಗದಿಂದ ಎಲೆಕ್ಟ್ರಾನಿಕ್ಸ್ ಸಂಬಂಧಿತ ಉಪಕರಣಗಳನ್ನೂ ಬಿಡಿಭಾಗಗಳನ್ನೂ ತಯಾರಿಸುತ್ತದೆ. ಪಾಲುಬಂಡವಾಳ ರೂ.46 ಮಿಲಿಯನ್. ಒಟ್ಟು ಬಂಡವಾಳ ರೂ 92 ಮಿಲಿಯನ್. ಕೆಲಸಗಾರರ ಸಂಖ್ಯೆ 765, 1982_83ರಲ್ಲಿ ಆದ ಉತ್ಪಾದನೆ ರೂ.25 ಮಿಲಿಯನ್. ಒಟ್ಟು ನಷ್ಟ ರೂ.4.2 ಮಿಲಿಯನ್. ಈ ಸಂಸ್ಥೆಯಲ್ಲಿಯ ಕಡಿಮೆ ಮೌಲ್ಯದ ಉತ್ಪಾದನೆಯೇ ನಷ್ಟಕ್ಕೆ ಕಾರಣ. ಗಣಕ ಸ್ವಯಂಚಾಲಿತ ದೂರವಾಣಿ ವಿನಿಮಯ ಕೇಂದ್ರ, ಐಇಆ ಜಾರ್ (ದೀಪದಂತೆ ಉರಿಯುವ ಡಯೋಡುಗಳ ಸಾಲು), ವಿವಿಧ ಫೆರೈಟುಗಳು, ಸೌರಶಕ್ತಿಯಿಂದ ವಿದ್ಯುತ್ತು ಉತ್ಪಾದಿಸುವ ಫೋಟೋವೋಲ್ಟೈಕ್ ಕೋಶಗಳು, ಮ್ಯಾಗ್ನೆಟ್ರಾನ್ ನಳಿಗೆ ಇತ್ಯಾದಿ ಇಲ್ಲಿಯ ಉತ್ಪನ್ನಗಳು.
	ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ಕಾರ್ಪೊರೇಷನ್ (ಏಇಔಓIಅS) ; ಭಾರತದ ಮುಖ್ಯ ರಾಜ್ಯಗಳೆಲ್ಲ ತಮ್ಮವೇ ಆದ ಒಂದೊಂದು ಎಲೆಕ್ಟ್ರಾನಿಕ್ ಉತ್ತೇಜನ ಸಂಸ್ಥೆಗಳನ್ನು ಸ್ಥಾಪಿಸಿಕೊಂಡಿವೆ. ಇವುಗಳಲ್ಲಿ ಅತಿಯಶಸ್ವಿಯಾದದ್ದು ಕೇರಳದ ಕೆಲ್ಟ್ರಾನ್. ಮಹಾರಾಷ್ಟ್ರ, ಉತ್ತರಪ್ರದೇಶ, ಬಂಗಾಳ, ಮದರಾಸು, ರಾಜಸ್ಥಾನಗಳಲ್ಲಿಯೂ ಇಂಥ ಸಂಸ್ಥೆಗಳಿವೆ. ಕರ್ನಾಟಕದಲ್ಲಿ ಐದು ವರ್ಷಗಳ ಹಿಂದೆ ಸ್ಥಾಪಿತವಾದ ಕಿಯಾನಿಕ್ಸಿನ ಪಾವತಿ ಮಾಡಲಾದ ಪಾಲುಬಂಡವಾಳ ರೂ.11 ಮಿಲಿಯನ್. ಎರಡು ಕಾರ್ಖಾನೆಗಳಲ್ಲಿ 1981-82ರಲ್ಲಿ ರೂ.5 ಮಿಲಿಯನ್ ಉತ್ಪನ್ನವಾಗಿದೆ. ಕೆಲಸಗಾರರ ಸಂಖ್ಯೆ 99. ಲಾಭ ರೂ.4 ಲಕ್ಷ. ಈ ಸಂಸ್ಥೆ ರಾಜ್ಯದ 220 ಸಣ್ಣ ಕೈಗಾರಿಕೆಗಳಿಗೆ ವಿವಿಧ ರೀತಿಯ ಸಹಾಯ ಒದಗಿಸಿದೆ. ಬೆಂಗಳೂರಿನ ಹತ್ತಿರ ಒಂದು ಎಲೆಕ್ಟ್ರಾನಿಕ್ಸ್ ನಗರ ಸ್ಥಾಪಿನೆಯಾಗಿದೆ. ಶೀಘ್ರದಲ್ಲಿಯೇ ಇಲ್ಲಿ ಕಾರ್ಖಾನೆಗಳು ಏಳಬಹುದು. ಕಿಯಾನಿಕ್ಸ್ ತಾನೇ ಖುದ್ಧಾಗಿ ದೂರದರ್ಶನ ಸೆಟ್ಟುಗಳನ್ನೂ,  ವೀಡಿಯೊ ವ್ಯವಸ್ಥೆಗಳನ್ನೂ ಟೆಲಿಪ್ರಿಂಟರ್ ವಿಭಾಗಗಳನ್ನು ಡಿಜಿಟಲ್ ಎಲೆಕ್ಟ್ರಾನಿಕ್ ಗಡಿಯಾರಗಳನ್ನೂ ಊಂಐ ಗಾಗಿ ಅಪ್ರೋಚ್ ರೇಡಾರ್ ನಿಯಂತ್ರಣ ವ್ಯವಸ್ಥೆಯನ್ನೂ ತಯಾರಿಸಿದೆ.

	ಫಿಲಿಪ್ಸ್ ಮತ್ತು ಸೀಮನ್ಸ್ : ಪ್ರಪಂಚದ ಎಲೆಕ್ಟ್ರಾನಿಕ್ಸ್ ಮತ್ತು ಸಂಬಂಧಿತ ಉದ್ಯಮದಲ್ಲಿ ಅಗ್ರಸ್ತಾನದಲ್ಲಿರುವುದು ಅಮೆರಿಕದ (((.ಉ( ಮತ್ತು (((. ಅನಂತರ ಫಿಲಿಪ್ಸ್, ಹಿಟಾಚಿ, ಮತ್ಸುಷಿಬಾ ಮತ್ತು ಸೀಮೆನ್ಸ್‍ಬರುತ್ತವೆ. ಇವುಗಳ ವೈಕಿ ವಿದೇಶೀ ವಿನಿಮಯ ನಿಯಂತ್ರಣವನ್ನು ಒಪ್ಪಿಕೊಳ್ಳದ ((( ಭಾರತದಿಂದ ಕಾಲು ಕಿತ್ತಿದೆ. ಫಿಲಿಪ್ಸ್ ಮೊದಲಿನಿಂಲೂ ಭಾರತದಲ್ಲಿ ರೇಡಿಯೊಗಳನ್ನು ತಯಾರಿಸುತ್ತಿದೆ. ಆದರೆ ಉದ್ಯೋಗಪರ ಎಲೆಕ್ಟ್ರಾನಿಕ್ಸಿನಲ್ಲಿ ಆಸಕ್ತಿ ತೋರಿಸಿಲ್ಲ. ಸೀಮೆನ್ಸ್ ಅಂತಾರಾಷ್ಟ್ರೀಯ ದೈತ್ಯಕಂಪನಿಗಳ ಪೈಕಿ ಒಂದು. ಇದು ಭಾರತದಲ್ಲಿ ಎಕ್ಸ್‍ಕಿರಣ ವ್ಯವಸ್ಥೆ. ಮೋಟರ್, ಸ್ವಿಚ್ ಗಿಯರ್ ಮತ್ತು ನಿಯಂತ್ರಣ ವ್ಯವಸ್ಥೆ ಇವನ್ನು ತಯಾರಿಸುತ್ತಿದೆ. ಸೀಮನ್ಸ್ ದೂರಸಂಪರ್ಕ ವ್ಯವಸ್ಥೆಗಳು ಭಾರತದಲ್ಲಿ ದೂರವಾಣಿ ಮತ್ತು ಟೆಲೆಕ್ಸ್‍ಗಾಗಿ ಉಪಯೋಗದಲ್ಲಿವೆ. 1982-83ರಲ್ಲಿ ಇದು ಭಾರತದಲ್ಲಿ ರೂ 1438 ಮಿಲಿಯನ್ ಬೆಲೆಯ ಸಾಮಗ್ರಿ ಮಾರಿ ರೂ 170 ಮಿಲಿಯನ್ ಲಾಭ ಸಂಪಾದಿಸಿತು. ಇದರ ಪಾಲು ಬಂಡವಾಳ ರೂ 108 ಮಿಲಿಯನ್, ಒಟ್ಟು ಬಂಡವಾಳ ರೂ 574 ಮಿಲಿಯನ್, ಕೆಲಸಗಾರರ ಸಂಖ್ಯೆ 7031.

	ಆಅಒ ಡೇಟಾ ಪ್ರಾಡಕ್ಟ್ಸ್ : ಡೆಲ್ಲಿ ಕಾಟನ್ ಮಿಲ್ಸ್ (ಆಅಒ) ಒಕ್ಕೂಟ ಭಾರತದಲ್ಲಿಯೇ ಏಳನೆಯ ದೊಡ್ಡ ಕೈಗಾರಿಕೆಗಳ ಗುಂಪು. ಆಅಒ ಡೇಟಾ ಪ್ರಾಡಕ್ಟ್ಸ್ ಇದರಲ್ಲೊಂದು ಉದ್ಯಮ. ಮೈಕ್ರೊ ಪ್ರೋಸೆಸರ್ ಚಿಪ್‍ಗಳನ್ನು ಉಪಯೋಗಿಸಿಕೊಂಡು ವಿವಿಧ ರೀತಿಯ ಕೆಲವು ಸಣ್ಣ ಗಣಕಗಳನ್ನು ಇದು ತಯಾರಿಸುತ್ತಿದೆ. 1972ರಿಂದ ಕೆಲಸ ಮಾಡುತ್ತಿರುವ ಈ ಉದ್ಯಮ ವರ್ಷಕ್ಕೆ ರೂ 140 ಮಿಲಿಯನ್ ಮೊತ್ತದ ವ್ಯಾಪಾರ ಮಾಡುತ್ತಿದೆ. 200 ವಿಜ್ಞಾನಿಗಳು ಮತ್ತು ಎಂಜಿನಿಯರುಗಳು ಸೇರಿದಂತೆ ಒಟ್ಟು 900 ಜನ ಕೆಲಸ ಮಾಡುತ್ತಿದ್ದಾರೆ. ಈಗ 2000 ಆಅಒ ಗಣಕಗಳು ವಿವಿಧ ಉದ್ದೇಶಗಳಿಗಾಗಿ ವಿವಿಧ ಸಂಸ್ಥೆಗಳಲ್ಲಿ ಬಳಕೆಯಲ್ಲಿವೆ. ಗಣಕಗಳಿಗೆ ಅಗತ್ಯವಾದ ತಾಂತ್ರಿಕಾಂಶವನ್ನೂ ವಿವಿಧ ರೀತಿಯ ಗಣನಕಾರಿಗಳನ್ನೂ ಆಅಒ ತಯಾರಿಸುತ್ತಿದೆ. ಈ ಸಂಸ್ಥೆಗೆ ಸಿಂಗಾಪುರ, ಅಮೆರಿಕಾಗಳಲ್ಲಿಯೂ ಶಾಖೆಗಳಿವೆ. ಇದು ರಫ್ತು ವ್ಯಾಪಾರವನ್ನು ಕೂಡ ಮಾಡುತ್ತದೆ.

	ನೆಲ್ಕೋ : ನ್ಯಾಷನಲ್ ರೇಡಿಯೊ ಅಂಡ್ ಎಲೆಕ್ಟ್ರಾನಿಕ್ಸ್ ಕಂಪೆನಿ ಲಿಮಿಟೆಡ್. ಇದೊಂದು ತಾತಾ ಕಂಪೆನಿಯ ಉದ್ಯಮ. ರೂ 17 ಮಿಲಿಯನ್. ಪಾಲು ಬಂಡವಾಳ, ಒಟ್ಟು ಬಂಡವಾಳ ರೂ 72 ಮಿಲಿಯನ್. 1982ರಲ್ಲಿ ರೂ 176 ಮಿಲಿಯನ್ ಮಾರಾಟಮಾಡಿ ರೂ 12  ಮಿಲಿಯನ್ ಲಾಭಗಳಿಸಿತು.  ರೇಡಿಯೊ ಸೆಟ್ಟುಗಳನ್ನು ಮಾತ್ರ ತಯಾರಿಸುತ್ತಿದ್ದ ಈ ಸಂಸ್ಥೆಯ ವ್ಯಾಪಾರ 1982ರಲ್ಲಿ ರೇಡಿಯೊಗಳಿಗೆ ಬೇಡಿಕೆ ಕಡಿಮೆಯಾಯಿತಾದುದರಿಂದ ಇತರ ಉತ್ಪನ್ನಗಳನ್ನು  ತಯಾರಿಸಲು ಹೊರಟಿದೆ. ಬಣ್ಣದ ಟಿ ವಿ ಸೆಟ್ಟುಗಳು, ಟೇಪ್ ರೆಕಾರ್ಡರುಗಳು ಮತ್ತು ಕೈಗಾರಿಕಾ ಎಲೆಕ್ಟ್ರಾನಿಕ್ಸ್ ಕ್ಷೇತ್ರವನ್ನು ಈ ಕಂಪನಿ ಈಗ ಪ್ರವೇಶಿಸಿದೆ.
(ಎನ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ